ಪುಷ್ಪ-2 ಸಿನಿಮಾ ಹೊಸ ದಾಖಲೆಯನ್ನು ಬರೆದಿದೆ. 6 ದಿನದಲ್ಲಿಯೇ 1000 ಕೋಟಿ ಬಾಚಿಕೊಂಡಿದೆ. ಈ ಮೂಲಕ ಭಾರತ ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿ 1000 ಕೋಟಿ ಕ್ಲಬ್ ಸೇರಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೊದಲು ಬಾಹುಬಲಿ-2 ಚಿತ್ರವು 10 ದಿನಗಳಲ್ಲಿ 1000 ಕೋಟಿ ಬಾಚಿಕೊಂಡ ಮೊದಲ ಚಿತ್ರವೆಂಬ ದಾಖಲೆ ಸ್ಥಾಪಿಸಿತ್ತು.
ಪುಷ್ಪ-2 ಸಿನಿಮಾದಲ್ಲಿ ಪುಷ್ಪರಾಜ್ ಆಗಿ ಅಲ್ಲು ಅರ್ಜುನ್, ಶ್ರೀವಲ್ಲಿ ಪಾತ್ರದ ಮೂಲಕ ರಶ್ಮಿಕಾ ಮಂದಣ್ಣ, ಖಳ ನಟನಾಗಿ ಫಹಾದ್ ಫಾಸಿಲ್ ಅತಿ ಹೆಚ್ಚು ಗಮನ ಸೆಳೆದಿದ್ದಾರೆ.

