ಕೋಟ : ಅಪಘಾತದ ವಿಚಾರವಾಗಿ ಗಲಾಟೆ ಉಂಟುಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗ ಮಾಡಿರುವ ಆರೋಪದ ಮೇರೆಗೆ ಕೋಟ ಪೊಲೀಸರು 2 ಕಾರು ಮತ್ತು 1 ಸ್ಕೂಟರ್ ಸಹಿತ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗಿಳಿಯಾರು ಕೋಟ ಜಾಮೀಯ ಮಸೀದಿ ಎದುರಿನ ರಾ.ಹೆ. 66ರಲ್ಲಿ ಡಿ.10ರ ಸಂಜೆಯ ವೇಳೆ, ಮುಹಮ್ಮದ್ ಇರ್ಷಾದ್(25), ವಿನಾಯಕ(30) ಮತ್ತು ದಿನೇಶ(38) ಎಂಬವವರು ವಾಹನಗಳು ತಾಗಿದ ವಿಚಾರವಾಗಿ ಗಲಾಟೆಯನ್ನು ಮಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡುತಿದ್ದರೆನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು 2 ಕಾರು ಮತ್ತು 1 ಸ್ಕೂಟರ್ ಸಹಿತ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

