ಮುಂಬೈ: ಬಾಂದ್ರಾದ ತಮ್ಮ ನಿವಾಸಕ್ಕೆ ನುಗ್ಗಿದ ದರೋಡೆಕೋರನನ್ನು ತಡೆಯಲು ಹೋದಾಗ ದರೋಡೆಕೋರನೊಬ್ಬ ಚಾಕುವಿನಿಂದ ಇರಿದು ನಟ ಸೈಫ್ ಅಲಿ ಖಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುರುವಾರ ಬೆಳಗಿನ ಜಾವ 2.30 ರ ಸುಮಾರಿಗೆ ನಟ ತಮ್ಮ ಮನೆಯಲ್ಲಿ ಮಲಗಿದ್ದಾಗ ದುಷ್ಕರ್ಮಿಯೊಬ್ಬ ನುಗ್ಗಿದ್ದು, ಈ ವೇಳೆ ಎಚ್ಚರವಾಗಿ ಹೋಗಿ ನೋಡುವ ಸಮಯದಲ್ಲಿ ದರೋಡೆಕೋರ ಚಾಕುವಿಂದ ಇರಿದಿದ್ದಾನೆ.

ಗಂಭೀರವಾಗಿ ಗಾಯಗೊಂಡ ನಟ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ .

