ಕೇಂದ್ರ ಸರ್ಕಾರ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ. ಮಹಿಳೆಯರಿಗಾಗಿ ಉದ್ಯೋಗಿನಿ ಎಂಬ ವಿಶೇಷ ಯೋಜನೆ ಜಾರಿಗೊಳಿಸಿದ್ದು ಇದರ ಮೂಲಕ ನಿರ್ದಿಷ್ಟ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿಗೆ ರೂ.3 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಮಹಿಳೆಯರಿಗೆ ಅಡುಗೆ ಎಣ್ಣೆ ವ್ಯಾಪಾರ ಆರಂಭಿಸಲು ಕೇಂದ್ರ ಸರ್ಕಾರ 1-3 ಲಕ್ಷದ ವರೆಗೆ ಸಾಲದ ನೆರವು ನೀಡುತ್ತದೆ.
ಹಿಂದುಳಿದ ವರ್ಗದ ಮಹಿಳೆಯರಿಗೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಅದೇ ರೀತಿ ಮಹಿಳಾ ಸಾಲಗಾರ ವಿಶೇಷ ವರ್ಗ ಅಥವಾ saamanya ವರ್ಗಕ್ಕೆ ಸೇರಿದವರಾಗಿದ್ದಾರೆ ಶೇ.30ರಷ್ಟು ಸಬ್ಸಿಡಿ ಸಿಗಲಿದೆ.

ಈ ಯೋಜನೆಯನ್ನು ವಾಣಿಜ್ಯ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಜಾರಿಗೊಳಿಸುತ್ತಿದ್ದು ಈ ಸಾಲ ಪಡೆಯಲು ಯಾವುದೇ ಗ್ಯಾರೆಂಟಿ ದಾಖಲೆಗಳ ಅಗತ್ಯವಿಲ್ಲ.

