ಬೆಂಗಳೂರು: ಬಿಗ್ ಬಾಸ್ ಕನ್ನಡ -11 ಸಂಕ್ರಾಂತಿ ಹಬ್ಬದ ಬಳಿಕ ವಾರದ ಮಧ್ಯದಲ್ಲಿ ಸ್ಪರ್ಧಿಯೊಬ್ಬರು ಹೊರ ಹೋಗಿದ್ದಾರೆ.
ಹನುಮಂತು, ಧನರಾಜ್ ಅವರನ್ನು ಹೊರತುಪಡಿಸಿದರೆ ಉಳಿದ ಸ್ಪರ್ಧಿಗಳು ಮಿಡ್ ವೀಕ್ ಎಲಿಮಿನೇಷನ್ ಭೀತಿಯಲ್ಲಿದ್ದಾರೆ.
ನಿನ್ನೆಯ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಬ್ಯಾಗ್ ಪ್ಯಾಕ್ ಮಾಡಲು ಹೇಳಿ ಮುಖ್ಯದ್ವಾರದ ಬಳಿ ನಿಲ್ಲಿಸಲಾಗಿತ್ತು. ಒಬ್ಬೊಬ್ಬರ ಮನಸ್ಸಿನಲ್ಲಿ ಎಲಿಮಿನೇಷನ್ ಭೀತಿ ಹುಟ್ಟಿಸಿ, ಕೊನೆಯಲ್ಲಿ ಭವ್ಯಾ, ಗೌತಮಿ ಅವರನ್ನು ನಿಲ್ಲಿಸಿ ಇವತ್ತು ಯಾರು ಹೋಗುತ್ತಿಲ್ಲ ಎಂದು ಬಿಗ್ ಬಾಸ್ ಹೇಳಿದ್ದರು. ಸಂಕ್ರಾಂತಿ ಹಬ್ಬವಾದ ಕಾರಣ ಎಲಿಮಿನೇಷನ್ ಮಾಡಿರಲಿಲ್ಲ.
ಆದರೆ ಮಿಡಿ್ ವೀಕ್ ಎಲಿಮಿನೇಷನ್ ಇರುತ್ತದೆ ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಬಿಗ್ ಬಾಸ್ ಮನೆಯಿಂದ ಒಬ್ಬರು ಮಧ್ಯರಾತ್ರಿಯೇ ಎಲಿಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಪಾಸಿಟಿವ್ ಆಗಿರುತ್ತೇನೆ ಎಂದು ಹೇಳುತ್ತಿದ್ದ ಗೌತಮಿ ಜಾಧವ್ ಅವರು ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಕಡಿಮೆ ವೋಟ್ ಬಂದ ಕಾರಣ ಗೌತಮಿ ಅವರು ದೊಡ್ಮನೆ ಆಟದಿಂದ ವಾರದ ಮಧ್ಯದಲ್ಲೇ ಔಟ್ ಆಗಿದ್ದಾರೆ.

