ಕನ್ನಡ ಚಿತ್ರರಂಗದಲ್ಲಿ ಬಾದ್ ಷಾ ಎಂದೇ ಖ್ಯಾತಿ ಪಡೆದಿರುವ ನಟ ಸುದೀಪ್ ಅವರು ಸಿನಿಮಾ ರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ. ಇವರು ಇತ್ತೀಚೆಗೆ ನಟಿಸಿದ ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಮಧ್ಯೆ ಅವರು ಅನೇಕ ಸಂದರ್ಶನದಲ್ಲಿ ಗಮನ ಸೆಳೆಯುವಂತಹ ಅನೇಕ ಹೇಳಿಕೆಗಳನ್ನು ನೀಡಿದ್ದರು. ಇದೀಗ ಅದು ಸಖತ್ ವೈರಲ್ ಆಗ್ತಾ ಇದೆ.
ನಟ ಸುದೀಪ್ ಅವರನ್ನು ನೋಡಿದ್ರೆ ಇನ್ನೂ ಇಪ್ಪತ್ತರ ತರುಣರಂತೆ ಕಾಣುತ್ತಾರೆ. ಇವರ ವಯಸ್ಸು ಎಷ್ಟೆಂದೇ ಅಂದಾಜಾಗೋದಿಲ್ಲ ಇವರು ದೇಹದಾರ್ಢ್ಯತೆಯನ್ನು ಅಷ್ಟೊಂದು ಚೆನ್ನಾಗಿ ಮೈಂಟೇನ್ ಮಾಡ್ತಾರೆ. ಇವರು ಸುಂದರವಾಗಿ ಕಾಣಲು ಏನ್ ಟ್ರಿಕ್ಸ್ ಫಾಲೋ ಮಾಡ್ತಾರೆ ಅನ್ನೋದನ್ನು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ` ಸ್ನಾನ ಮಾಡಿದ ಮೇಲೆ, ಮಲಗುವಾಗಲೂ ತಪ್ಪಿಯೂ ನಾನು ಕ್ರೀಂ ಹಚ್ಚಲ್ಲ. ವರ್ಷಕ್ಕೆ ಮೂರು ದಿನ ತಲೆಗೆ ಎಣ್ಣೆ ಹಚ್ಚಿದ್ರೆ ಹೆಚ್ಚು. ನಾನು ಸ್ಕಿನ್ ಕೇರ್ ಮಾಡಲ್ಲ. ಸ್ನಾನ ಮಾಡಿ ಪೂಜೆ ಮಾಡಿ ನೇರವಾಗಿ ಶೂಟಿಂಗ್ ಗೆ ಹೋಗ್ತೇನೆ. ಊಟ ಸರಿಯಾದ ಟೈಮಿಗೆ ಮಾಡಿ ಮುಗಿಸ್ತೇನೆ. ದೇವರ ದಯೆಯಿಂದ ನನಗೆ ಸಿರಮ್ ಬಳಸುವ ಅವಶ್ಯಕತೆ ಬಂದಿಲ್ಲ ಎಂದಿದ್ದಾರೆ.
ಇನ್ನು ವರ್ಕೌಟ್ ಬಗ್ಗೆ ಮಾತನಾಡಿರುವ ಅವರು ನಾನು ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಅದೇ ನನ್ನ ಬ್ಯೂಟಿ ಸೀಕ್ರೆಟ್ ಎಂದಿದ್ದಾರೆ. ನಿತ್ಯವೂ ಬಿಡದೆ ವ್ಯಾಯಾಮ, ವರ್ಕೌಟ್ ಮಾಡುವುದರಿಂದ ನಾನು ಆರೋಗ್ಯವಾಗಿದ್ದೇನೆ ಎಂದಿದ್ದಾರೆ


