ವಿಟಮಿನ್ ಡಿ ಅಂಶವು ಮನುಷ್ಯನ ದೇಹದ ಆರೋಗ್ಯಕ್ಕೆ ಅತ್ಯಂತ ಮುಖ್ಯವಾದದ್ದು. ದೇಹದಲ್ಲಿ ಈ ವಿಟಮಿನ್ ಡಿ ಕೊರತೆಯಾದ್ರೆ ಅದು ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ಅನೇಕ ದೇಹದ ಖಾಯಿಲೆಗಳನ್ನು ಸೃಷ್ಟಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವಿಟಮಿನ್ ಡಿ ಕೊರತೆ ಕಂಡುಬರುತ್ತಿರೋದು ಸಾಮಾನ್ಯ ಸಮಸ್ಯೆಯಾಗಿದೆ.
ಸಾಮಾನ್ಯವಾಗಿರುವುದಕ್ಕಿಂತ ಹೆಚ್ಚಾಗಿ ಕೂದಲು ಉದುರುತ್ತಿದ್ದರೆ ನಿರ್ಲಕ್ಷಿಸಬೇಡಿ. ಕೂಡಲೇ ಎಚ್ಚೆತ್ತುಕೊಳ್ಳಿ. ಇದು ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು. ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ವಿಟಮಿನ್ ಇದಾಗಿದ್ದು ಇದರ ಕೊರತೆ ಉಲ್ಬಣವಾದ್ರೆ ಕೂದಲಿನ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ದಿಢೀರ್ ತೂಕ ಹೆಚ್ಚಾಗೋದು ಕೂಡಾ ವಿಟಮಿನ್ ಡಿ ಕೊರತೆಯ ಲಕ್ಷಣವಾಗಿರಬಹುದು. ವಿಟಮಿನ್ ಡಿ ನಮ್ಮ ದೇಹಕ್ಕೆ ನೈಟ್ರಿಕ್ ಆಕ್ಸೈಡ್ ನ್ನು ನೀಡುತ್ತದೆ. ಇದು ತೂಕವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಕೊರತೆಯಿಂದ ತೂಕ ಹೆಚ್ಚಾಗಬಹುದು.
ಸುಸ್ತಾಗೋದು, ಖಿನ್ನತೆ, ಸಿಡುಕು ಸ್ವಭಾವ, ಸಣ್ಣ ವಿಚಾರಗಳಿಗೂ ಅಳುವುದು, ಕೀಲು ಮತ್ತು ಸ್ನಾಯುಗಳಲ್ಲಿ ನೋವು ಇವೆಲ್ಲವೂ ವಿಟಮಿನ್ ಡಿ ಕೊರತೆಯಿಂದ ಆಗುವಂತಹ ದೇಹ ಬಾಧೆಗಳಾಗಿವೆ. ಸೂರ್ಯನ ಕಿರಣವನ್ನು ನೈಸರ್ಗಿಕವಾಗಿ ತೆಗೆದುಕೊಳ್ಳುವುದರಿಂದ ಈ ಕೊರತೆಯನ್ನು ನಿಯಂತ್ರಿಸಿಕೊಳ್ಳಬಹುದು. ಮೊಟ್ಟೆ, ಹಾಲು, ಕೊಬ್ಬಿನ ಅಂಶಗಳಿರುವ ಮೀನು, ಕಿತ್ತಾಳೆ ಇವೆಲ್ಲವು ವಿಟಮಿನ್ ಡಿ ಅಂಶವನ್ನು ಪೂರೈಸುವ ಆಹಾರಗಳಾಗಿವೆ

