ಬ್ರಹ್ಮಾವರ ತಾಲ್ಲೂಕಿನ ಸಾಸ್ತಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ತಿಕೇಯ ಎಸ್ಟೇಟ್ ನಲ್ಲಿ ಏ. 1ರಿಂದ 3ರವರೆಗೆ ನಡೆಯಲಿದೆ.
ಪಾಂಡೇಶ್ವರದ ವಿದ್ವಾನ್ ವಿಜಯ ಮಂಜರ್ ಮಾರ್ಗದರ್ಶನದಲ್ಲಿ ಉದ್ಯಮಿ ಎಂ.ಸಿ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಐರೋಡಿ ವಿಠಲ ಪೂಜಾರಿ ಮತ್ತು ಗ್ರಾಮಸ್ಥರ ಸಾರಥ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ 30 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಭಾಗಿಯಾಗುವ ನಿರೀಕ್ಷೆಯಿದೆ.
ಏ. 1ರ ಮಂಗಳವಾರ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿವಾಚನ, ಪುಣ್ಯಾಹವಾಚನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ 3ರಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಏಪ್ರಿಲ್ 2ರಂದು ದೇವತಾ ಪ್ರಾರ್ಥನೆ, ನವಗ್ರಹ ಹೋಮ, ಮಧ್ಯಾಹ್ನ 3ರಿಂದ ಪ್ರವೀಣ್ ಪಡುಕೆರೆ ನೇತೃತ್ವದಲ್ಲಿ ವಿಶೇಷ ಕುಣಿತ ಭಜನೆ, ಸಂಜೆ 5.30ರಿಂದ ಪುತ್ತೂರು ಜಗದೀಶ ಆಚಾರ್ ಮತ್ತು ತಂಡದವರಿಂದ ಭಕ್ತಿ ರಸಮಂಜರಿ, ರಾತ್ರಿ 7ರಿಂದ ವಿದ್ವಾನ್ ವಿಜಯ ಮಂಜರ್ ಪಾಂಡೇಶ್ವರ ಅವರಿಂದ ಧಾರ್ಮಿಕ ಸಂದೇಶ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಉದ್ಘಾಟಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವರಾದ ಜಯಪ್ರಕಾಶ ಹೆಗ್ಡೆ, ಪ್ರಮೋದ್ ಮಧ್ವರಾಜ್, ಕೋಟ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಭಾಗವಹಿಸುವರು. ಬಳಿಕ ರಾತ್ರಿ 9 ರಿಂದ ಶ್ರೀ ಮೈಸೂರು ರಾಮಚಂದ್ರ ಆಚಾರ್ ನೇತೃತ್ವದಲ್ಲಿ ಭಜನಾಮೃತ ನಡೆಯಲಿದೆ.
ಏ. 3ರಂದು ಬೆಳಿಗ್ಗೆ 9ರಿಂದ ಸ್ಥಳ ಶುದ್ಧಿ, ಪುಣ್ಯಾಹ ವಾಚನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 3ರಿಂದ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಿಂದ ಕುಣಿತ ಭಜನೆ, ಸ್ತಬ್ಧಚಿತ್ರ, ಸಕಲ ಮಂಗಳವಾದ್ಯಗಳೊಂದಿಗೆ ಪದ್ಮಾವತಿ ಸಹಿತ ಶ್ರೀನಿವಾಸ ದೇವರ ದಿವ್ಯ ಶೋಭಾಯಾತ್ರೆ, ಸಂಜೆ 5ರಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ನೇರ ಪ್ರಸಾರವನ್ನು ನಮ್ಮ ಕರಾವಳಿ ಟಿವಿಯಲ್ಲಿ ವೀಕ್ಷಿಸಬಹುದು.
