ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಖಾಸಗಿ ಕಾರ್ಯದರ್ಶಿಯಾಗಿ ಯುವ ಐಎಫ್ ಎಸ್ ಅಧಿಕಾರಿ ನಿಧಿ ತಿವಾರಿ ಅವರು ನೇಮಕಗೊಂಡಿದ್ದು ತಕ್ಷಣದಿಂದ ಆದೇಶ ಜಾರಿಗೆ ಬರುವಂತೆ ಡಿಒಪಿಟಿ ನೇಮಕಾತಿಯನ್ನು ಅನುಮೋದಿಸಿದೆ.
೨೦೧೪ರ ಬ್ಯಾಚ್ ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾಗಿ ಇವರು ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ನಿಧಿ ತಿವಾರಿ ಮೂಲತಃ ವಾರಣಾಸಿಯವರು. ೨೦೧೩ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೊಂಭತ್ತಾರನೇ ರ್ಯಾಂಕು ಗಳಿಸಿದ್ದರು. ಪ್ರಧಾನಿ ಸಚಿವಾಲಯದಲ್ಲಿ ಇವರು ಮೂರು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಅನುಭವ ಹೊಂದಿದ್ದಾರೆ.
ಈ ಹಿಂದೆ ತಿವಾರಿ ಅವರು ನೇಮಕವಾದ ಸ್ಥಾನದಲ್ಲಿ ಸದ್ಯ ವಿವೇಕ್ ಕುಮಾರ್ ಹಾಗೂ ಹಾರ್ದಿಕ್ ಸತೀಶ್ಚಂದ್ರ ಶಾ ಅವರಿದ್ದರು. ಇದೀಗ ನೂತನವಾಗಿ ನಿಧಿ ತಿವಾರಿ ಅವರನ್ನು ಆಯ್ಕೆ ಮಾಡಲಾಗಿದೆ.


