ಸಿನಿಮಾ ನಟ ನಟಿಯರೆಂದರೆ ಅವರಿಗೆ ತನ್ನದೇ ಆದ ಬಿರುದುಗಳಿರುವುದು ಸಹಜ. ನಟರಿಗೆ ಮಾತ್ರ ಏಕೆ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ, ಸಿನಿಮಾ ನಿರ್ದೇಶಕರಿಗೆ, ಕ್ರೀಡಾ ಸಾಧಕರು ಕೂಡಾ ತಮ್ಮದೇ ಆದ ಒಂದು ವಿಶಿಷ್ಟ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಆದರೆ ಕರಾವಳಿಯ ಹೆಮ್ಮೆಯ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ಅಂತಹ ಯಾವುದೇ ಬಿರುದುಗಳ ಹಿಂದೆ ಹೋಗಲೇ ಇಲ್ಲ. ಅಭಿಮಾನಿಗಳು ಪ್ರೀತಿಯಿಂದ ಹೆಸರಿನಲ್ಲೇ ಕರೆದರೆ ಸಾಕು ಎಂದು ಹೇಳುತ್ತಿದ್ದರು. ಆದರೆ ಇದೀಗ ಅವರ ಬಿರುದು ಕೂಡಾ ರಿವೀಲ್ ಆಗಿದೆ.
45′ ಚಿತ್ರತಂಡ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರಿಗೆ ಹೊಸ ಬಿರುದು ನೀಡಲು ಮುಂದಾಗಿತ್ತು. ಆದರೆ ಅವರು ನಯವಾಗಿಯೇ ಅದನ್ನು ತಿರಸ್ಕರಿಸಿದ್ದರು. ಆದರೆ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಆ ಟೈಟಲ್ ಏನು ಎನ್ನುವುದನ್ನು ಶಿವಣ್ಣ ರಿವೀಲ್ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಅವರನ್ನು ಶಿವಣ್ಣ ಸೋಲ್ ಸ್ಟಾರ್ ಎಂದು ಕರೆದಿದ್ದಾರೆ. ಯಾವುದೇ ಪಾತ್ರ ನೀಡಿದ್ರೂ ಅದಕ್ಕೆ ಜೀವ ತುಂಬುವ ಇವರ ಪ್ರತಿಭೆಗೆ ತಕ್ಕುದಾಗಿ ಟೈಟಲ್ ನೀಡಲಾಗಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ನಿರ್ದೇಶನದಲ್ಲಿ `೪೫’ ಚೊಚ್ಚಲ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ನಟ ಉಪೇಂದ್ರ, ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ ಅವರು ನಟಿಸಿಲಿದ್ದಾರೆ. ಆಗಸ್ಟ್ ಹದಿನೈದಕ್ಕೆ ಈ ಸಿನಿಮಾ ರಿಲೀಸ್ ಆಗಿದೆ.

