ಕಾರ್ಕಳ: ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಕಾರ್ಕಳದ ಜ್ಞಾನಸುಧಾ ವಿದ್ಯಾರ್ಥಿನಿ ಸ್ವಸ್ತಿ ಈ ಪರೀಕ್ಷೆಯಲ್ಲಿ ಆರುನೂರ ಇಪ್ಪತ್ತೈದು ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಾರ್ಕಳದ ಕಣಂಜಾರು ನಿವಾಸಿ ಜನಾರ್ಧನ್ ಕಾಮತ್ ಮತ್ತು ಶಾಂತಿ ಕಾಮತ್ ಮಗಳಾಗಿರುವ ಈಕೆ ತಂದೆಯ ಹುಟ್ಟುಹಬ್ಬದ ದಿನದಂದೇ ಗುಡ್ ನ್ಯೂಸ್ ನೀಡಿದ್ದಾಳೆ.
ರಾಜ್ಯದಲ್ಲಿ ಒಟ್ಟು ಇಪ್ಪತ್ತೆರಡು ವಿದ್ಯಾರ್ಥಿಗಳು ಆರುನೂರ ಇಪ್ಪತ್ತೈದು ಅಂಕ ಗಳಿಸಿದ್ದು ಅವರಲ್ಲಿ ಇವಳೂ ಓರ್ವಳು. ಇನ್ನು ಸ್ವಸ್ತಿಗೆ ತಾನು ಕಲಿಯುತ್ತಿರುವ ವಿದ್ಯಾಸಂಸ್ಥೆಯಿಂದ ಎರಡು ಲಕ್ಷ ರೂ ನಗದು ಬಹುಮಾನ ಕೂಡಾ ಘೋಷಣೆಯಾಗಿದೆ.


