ಮಂಗಳೂರು: ನಿನ್ನೆ ತಾನೇ ಬಜ್ಪೆಯ ಕಿನ್ನಿಪದವಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ದ.ಕ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಮೃತದೇಹ ಕೂಡಾ ಸಾಗಿಸಲಾಗುತ್ತಿದೆ. ಈ ಮಧ್ಯೆ ಇದೀಗ ಅವರ ತಂದೆ ಕಣ್ಣೀರಿಡುತ್ತಾ ಹೇಳಿಕೆ ನೀಡಿದ್ದಾರೆ.
ನಮಗೆ ಮೊದಲೇ ಭಯವಿತ್ತು. ಜೀವ ಬೆದರಿಕೆ ಬಗ್ಗೆಯೂ ತಿಳಿಸಿದ್ದ. ಶತ್ರುಗಳು ಫಾಲೋ ಮಾಡಿಕೊಂಡು ಬಂದಿದ್ದರು ಎಂದು ಕೂಡಾ ಹೇಳಿದ್ದ. ಸ್ವಲ್ಪ ಹುಷಾರಾಗಿರು. ಮನೆಗೆ ಬೇಗ ಬಾ ಎಂದು ಕೂಡಾ ನಾವು ಹೇಳ್ತಿದ್ದೆವು ಎಂದು ಭಾವುಕವಾಗಿ ಮಾತನಾಡಿದ್ದಾರೆ.
ಸಿದ್ಧರಾಮಯ್ಯ ಸರ್ಕಾರದ ತನಿಖೆಯ ಮೇಲೆ ನನಗೆ ನಂಬಿಕೆಯಿಲ್ಲ. ಇತ್ತೀಚೆಗೆ ತಮ್ಮನ ಮಗಳ ಮದುವೆಯಲ್ಲಿ ಸಿಕ್ಕಿದ್ದ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದ್ವಿ. ಕನಿಷ್ಠ ಪಕ್ಷ ನನ್ನ ಮಗನ ಸಾವಿಗಾದರೂ ನ್ಯಾಯ ಸಿಗಲಿ ಎಂದು ಕಣ್ಣೀರಿಟ್ಟಿದ್ದಾರೆ.

