ಹೆಬ್ರಿ: ಹೆಬ್ರಿ ತಾಲೂಕು ಶಿವಪುರ ಗ್ರಾಮದ ಬ್ಯಾಣ ಬಳಿ ಪಾದಚಾರಿಗೆ ಸ್ಕೂಟರ್ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಗಾಯಗೊಂಡ ಘಟನೆ ನಡೆದಿದೆ.
ಲಕ್ಷ್ಮೀ (60)ರವರು ಗಾಯಗೊಂಡ ಮಹಿಳೆ.
ಶಿವಪುರ ಗ್ರಾಮದ ಬ್ಯಾಣ ಬಳಿ ಶ್ರೀ ಗದ್ದುಗೆ ಅಮ್ಮನವರ ದೇವಸ್ಥಾನದ ಹತ್ತಿರ ರಸ್ತೆ ದಾಟುವಾಗ ಸ್ಕೂಟರ್ ಸವಾರ ಮಧನ್ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮ ಲಕ್ಷ್ಮೀಯವರ ತಲೆಯ ಹಿಂಭಾಗ, ಎಡಗೈ ಹಾಗೂ ಎಡಕಾಲಿಗೆ ತೀವ್ರ ತರಹದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

