ಹೆಬ್ರಿ: ತಾಲೂಕಿನ ಬೇಳಂಜೆ ಗ್ರಾಮದ ಅಂಚೆ ಕಚೇರಿಯಲ್ಲಿ ಪೋಸ್ಟ್ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಾನಮ್ಮ ತೇಲಿ ಎಂಬುವರು ಸೋಮವಾರ ತನ್ನ ಗಂಡನ ಜತೆ ಬೇಳಂಜೆ ಗ್ರಾಮದ ಹಾನಾಡಿ ತುಮರಿಜೆಡ್ಡಿನ ಮೋಹನದಾಸರ ಮನೆಗೆ ರಿಜಿಸ್ಟರ್ ಪೋಸ್ಟ್ ನೀಡಲು ಹೋಗಿದ್ದಾಗ ಅವರ ಮನೆಯಿಂದ 3 ನಾಯಿಗಳು ಕಂಪೌಂಡ್ನಿಂದ ನುಸುಳಿ ದಾಳಿ ಮಾಡಿವೆ.
ದಾನಮ್ಮ ತೇಲಿ ಮತ್ತು ಅವರ ಪತಿಯನ್ನು ಕಚ್ಚಿ, ಪರಚಿ ಗಾಯಗೊಳಿಸಿದೆ. ದಾನಮ್ಮ ತೇಲಿ ಅವರ ತಲೆ, ಸೊಂಟ, ಕಾಲುಗಳಿಗೆ ಗಂಭೀರ ಗಾಯವಾಗಿದೆ. ದೇಹದ ಮೇಲೆ ಅಲ್ಲಲ್ಲಿ ಪರಚಿದ ಗಾಯವಾಗಿದೆ. ದಾನಮ್ಮ ಅವರ ಗಂಡನಿಗೆ ಎರಡೂ ಕೈಗಳಿಗೆ ಕಚ್ಚಿದ ಗಾಯ ಹಾಗೂ ಎದೆಯ ಎಡಭಾಗದಲ್ಲಿ ಉಗುರಿನಿಂದ ಪರಚಿದ ಗಾಯವಾಗಿದೆ.
ಇಬ್ಬರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಚ್ಚಿದ ನಾಯಿಗಳು ಪಿಟ್ ಬುಲ್ ಜಾತಿಯದಾಗಿದ್ದು, ಮೋಹನದಾಸ್ ನಾಯಿಗಳನ್ನು ಹತೋಟಿಯಲ್ಲಿರಿಸಿಲ್ಲ. ನಿರ್ಲಕ್ಷ್ಯ ತೋರಿದ್ದಾರೆ ಎಂದು ದಾನಮ್ಮ ತೇಲಿ ಹೆಬ್ರಿ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

