ಮರವಂತೆ: ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಈಗಾಗಲೇ ಕರಾವಳಿಯಲ್ಲಿ ಅನೇಕ ಅನಾಹುತಗಳು ಸಂಭವಿಸಿದೆ. ಸಮುದ್ರ ಸಹ ಪ್ರಕ್ಷುಬ್ಧಗೊಂಡಿದ್ದು ಪ್ರವಾಸಿಗರು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈ ಸೂಚನೆ ಅನುಸರಿಸದೆ ಪ್ರವಾಸಿಗರು ಎಂಜಾಯ್ ಮಾಡುತ್ತಿರುವುದು ಕಂಡುಬಂದಿದೆ.
ಕಳೆದ ಕೆಲವು ದಿನಗಳಿಂದ ಕಡಲಬ್ಬರ ಜೋರಾಗಿರುವುದರಿಂದ ಸಮುದ್ರಕ್ಕೆ ಇಳಿಯದಂತೆ ಫಲಕ ಹಾಕಿ ಕೆಂಪು ರಿಬ್ಬನ್ ಗಳನ್ನು ಕಟ್ಟಲಾಗಿದೆ. ಆದರೂ ಅಲೆಗಳು ಅಪ್ಪಳಿಸುವ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಮಲ್ಪೆಯಲ್ಲಿರುವಂತೆ ಮರವಂತೆಯಲ್ಲಿಯೂ ಬಲೆ ಅಳವಡಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಮಾಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ ನಾಯ್ಕ ಹೇಳಿದ್ದಾರೆ


