ಉಡುಪಿ : ನಗರದ ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಡ್ರೈನೇಜ್ ಚೆಂಬರ್ ಮುಚ್ಚಳಿಕೆಯಿಂದ ತ್ಯಾಜ್ಯ ನೀರು ಹೊರ ಬರುತ್ತಿದ್ದು, ನಿಲ್ದಾಣ ಪರಿಸರದಲ್ಲಿ ಗಬ್ಬು ವಾಸನೆ ಹಬ್ಬಿದೆ.
ಗಬ್ಬು ವಾಸನೆಯಿಂದ ಹೋಟೆಲಿನಲ್ಲಿ ಆಹಾರ ಸೇವನೆಗೂ ವಾಕರಿಕೆ ತರಿಸುತ್ತಿದೆ. ಪ್ರಯಾಣಿಕರು ಮೂಗು ಮುಚ್ಚಿ ತಿರುಗಾಡ ಬೇಕಾದ ಪರಿಸ್ಥಿತಿ ಎದುರಾಗಿದೆ.
ನಗರಾಡಳಿತ ತಕ್ಷಣವಾಗಿ ದುಸ್ಥಿತಿಯಲ್ಲಿರುವ ಚೇಂಬರನ್ನು ದುರಸ್ಥಿಪಡಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡುವರು ಆಗ್ರಹಪಡಿಸಿದ್ದಾರೆ.



