ಉಡುಪಿ : ಮುಂಬೈಯಿಂದ ಕಾಣೆಯಾಗಿದ್ದ ಯುವಕನೋರ್ವ ಉಡುಪಿಯ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುರವರು ನಗರ ಠಾಣೆಯ ಪೋಲಿಸರಿಗೆ ಹಸ್ತಾಂತರಿಸಿದ್ದಾರೆ.
ಯುವಕನ ಹೆಸರು ರವೀಂದ್ರ ಪೈ (45ವ) ಉಡುಪಿ ಭಾಗದವನು, ಮುಂಬೈನಲ್ಲಿ ಉದ್ಯೋಗ ನಿಮಿತ್ತವಾಗಿ ನೆಲೆಕಂಡಿದ್ದನು. ಯಾವುದೋ ಕಾರಣಕ್ಕೆ ಮನೊಂದು ಯುವಕ ಮನೆಮಂದಿಗೆ ಸೂಚನೆ ನೀಡದೆ ನಾಪತ್ತೆಯಾಗಿದ್ದರು.
ಈ ಬಗ್ಗೆ ಮುಂಬೈ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮನೆಯವರು ಸಮಾಜಸೇವಕ ಒಳಕಾಡುವರಲ್ಲಿ ಯುವಕನ ಬಗ್ಗೆ ಮಾಹಿತಿ ನೀಡಿ ಪತ್ತೆಗೊಳಿಸಲು ಮನವಿ ಮಾಡಿದ್ದರು.
ಯುವಕ ಉಡುಪಿಯಲ್ಲಿರುವ ಬಗ್ಗೆ ಮಾಹಿತಿ ಪಡೆದ ಒಳಕಾಡುರವರು ಯುವಕನ ಬಳಿ ಬಂದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸ್ಥಳೀಯ ಚಾಲಕರಾದ ಯೋಗಿಶ್, ಸುಧಾಕರ ಶೆಣೈ ನೆರವಿ ನೊಂದಿಗೆ ಯುವಕನನ್ನು ರಕ್ಷಿಸಿ ನಗರ ಠಾಣೆಗೆ ಹಸ್ತಾಂತರಿಸಿದರು.
ಯುವಕನ ಮೊನವೊಲಿಸಿದ ಪಿ.ಎಸ್.ಐ ಭರತೇಶ್, ಎ.ಎಸ್.ಐ ನವೀನ್ ದೇವಾಡಿಗ ಅವರು, ಸಂಬಂಧಿ ದೇವಿಪ್ರಸಾದ್ ಭಟ್ ಅವರಿಗೆ ಹಸ್ತಾಂತರಿಸುವ ಮೂಲಕ ಪ್ರಕ ರಣವನ್ನು ಸುಖಾoತ್ಯಗೊಳಿಸಿದರು.

