ಕಾರ್ಕಳ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಹಾಗೂ ಕಾರ್ಕಳದ ಕುಂದಾಪ್ರದವರು ಇವರ ಜಂಟಿ ಆಶ್ರಯದಲ್ಲಿ ಇದೇ ಬರುವ ಜುಲೈ 24ರ ಗುರುವಾರ ಸಂಜೆ 4.30ಕ್ಕೆ ಸರಿಯಾಗಿ ಕಾರ್ಕಳದ ಹೊಟೇಲ್ ಪ್ರಕಾಶ್ ನ ಸಂಭ್ರಮ ಹಾಲ್ ನಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ನಡೆಯಲಿದೆ.
`ಭಾಷಿ ಅಲ್ಲ ಬದ್ಕ್’ ಈ ವಿಷಯದ ಮೇಲೆ ಹಿರಿಯ ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಎ.ಎಸ್.ಎನ್ ಹೆಬ್ಬಾರ್ ಕುಂದಾಪುರ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಾಗೆಯೇ ಬಂದಿರುವ ಅತಿಥಿ ಗಣ್ಯರಿಗೆ ಆಷಾಢ ದಿನದ ಪ್ರಯುಕ್ತ ಸವಿಯಲು ವಿಶೇಷ ಖಾದ್ಯಗಳ ವ್ಯವಸ್ಥೆ ಕೂಡಾ ಇರಲಿದೆ.
ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚಂದಗಾಣಿಸಿ ಕೊಡುವಂತೆ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

