ಕಾಪು: ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಇಂದು ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಸನ್ನಿಧಾನದಲ್ಲಿ ಎಲ್ಲಿ ನಿಂತರೂ, ಕೂತರೂ, ಕೈ ಮುಗಿದರೂ ಕೂಡಾ ದೇವಿ ಇದ್ದಾಳೆ ಎಂಬುವುದು ಖಾತ್ರಿಯಾಗುತ್ತದೆ. ನಮ್ಮ ಸಿನಿಮಾ ಬಿಡುಗಡೆ ಇರುವುದರಿಂದ ದೇವಸ್ಥಾನಕ್ಕೆ ಬಂದೆ ಎಂದು ಮಾಧ್ಯಮಕ್ಕೆ ಅವರು ಪ್ರತಿಕ್ರಿಯೆ ನೀಡಿದರು.
ಸು ಫ್ರಂ ಸೋ ಸಿನಿಮಾ ರಿಲೀಸ್ ಪ್ರಯುಕ್ತ ಸಿನಿಮಾ ತಂಡ ದೇಗುಲಕ್ಕೆ ಭೇಟಿ ನೀಡಿತು. ರಾಜ್ ಬಿ ಶೆಟ್ಟಿ ಅವರನ್ನು ದೇಗುಲದ ವತಿಯಿಂದ ಈ ಸಂದರ್ಭ ಗೌರವಿಸಲಾಯಿತು.

