ಉಡುಪಿ: ದನವನ್ನು ಹಿಂಸಾತ್ಮಕವಾಗಿ ಹಲ್ಲೆ ಮಾಡಿ ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಘಟನೆ ಶಿರೂರು ಮೂರುಕೈ ಪೇಟೆಯ ನೀರ್ ಜೆಡ್ಡು ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಾಫಿರ್, ಕೃಷ್ಣ ನಾಯ್ಕ ಬಂಧಿತ ಆರೋಪಿಗಳು.
ಹೋಸಾ ರಸ್ತೆಯ ಬದಿಯಲ್ಲಿ ಇಕೋ ಸ್ಪೋರ್ಟ್ ಕಾರಿನಲ್ಲಿ ಮೂರು ಜನ ದುರುಳರು ಹಿಂಸಾತ್ಮಕವಾಗಿ ದನವನ್ನು ವಾಹನದಲ್ಲಿ ತುರುಕಿಸಲು ಯತ್ನಿಸುತ್ತಿದ್ದರು. ಆಗ ಸುದೀಪ್ ಎಂಬವರ ಬೈಕ್ ಹತ್ತಿರ ಬರುತ್ತಿದ್ದಂತೆ, ಅವರನ್ನು ನೋಡಿ ದನವನ್ನು ಕಾರಿಗೆ ತುಂಬಿತ್ತಿದ್ದ ಮೂರು ಜನರಲ್ಲಿ ಒಬ್ಬನು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಉಳಿದ ಇಬ್ಬರು ದನ ತುಂಬಿಸಿಕೊಂಡು ಕಾರಿನಲ್ಲಿ ಪರಾರಿಯಾಗಿರುತ್ತಾರೆ. ಆರೋಪಿಗಳು ದನವನ್ನು ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ, ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಸುದೀಪ್ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ತನಿಖೆ ಕೈಗೊಂಡ ಬ್ರಹ್ಮಾವರ ಪೊಲೀಸ್ ಉಪ ನಿರೀಕ್ಷಕರು ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇನ್ನೊಬ್ಬ ಆರೋಪಿಯು ತಲೆಮರಿಸಿಕೊಂಡಿದ್ದಾರೆ.

