ಕೋಟ: ವೃದ್ಧರನ್ನು ನೋಡಿಕೊಳ್ಳಲು ನೇಮಕ ಮಾಡಿದ್ದ ಹೋನರ್ಸ್ ಓರ್ವರು ಮನೆಯಲ್ಲಿನ ಚಿನ್ನಾಭರಣ, ನಗದು ಮತ್ತು ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಕೋಟಾದಲ್ಲಿ ನಡೆದಿದೆ.
ಪಾಂಡೇಶ್ವರದ ಸಿಪ್ರಿಯನ್ ಡಿ ಅಲ್ಮೆಡಾ ಎಂಬವರ ತಾಯಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು ಅವರನ್ನು ನೋಡಿಕೊಳ್ಳಲು ಸಾಗರ ಮೂಲದ ಅವರನ್ನು ನೇಮಕ ಮಾಡಲಾಗಿತ್ತು. ನಂತರ ಅವರು ಮಗನಿಗೆ ಹುಷಾರಿಲ್ಲ ಎಂಬ ಕಾರಣಕ್ಕೆ ಅವಳು ಊರಿಗೆ ಹೋಗಿದ್ದಳು.
ಸಿಪ್ರಿಯನ್ ಅವರು ತಾಯಿಯ ಕೋಣೆಗೆ ಹೋಗಿ ಕಪಾಟಿನಲ್ಲಿ ಲಾಕರ್ ತೆಗೆದು ನೋಡಿದಾಗ ಡ್ರಾವರ್ ನಲ್ಲಿದ್ದ ಐದು ಲಕ್ಷಕ್ಕೂ ಅಧಿಕ ಮೌಲ್ಯದ ಒಡವೆಗಳು, ಎಂಭತ್ತೇಳು ಸಾವಿರ ಮೌಲ್ಯದ ನಗದು ಹಾಗೂ ಲಕ್ಷಕ್ಕೂ ಅಧಿಕ ಮೌಲ್ಯದ ಪಾತ್ರೆ ಸೆಟ್, ಚೂರಿ ಸೆಟ್ ಗಳು ಕಳವಾಗಿರೋದು ಗಮನಕ್ಕೆ ಬಂದಿದೆ.
ನಂತರ ಮನಗೆಲಸದಾಕೆಯನ್ನು ಠಾಣೆಗೆ ಕರೆಯಿಸಿ ಮಾತುಕತೆ ನಡೆಸಿದ್ದು ತಪ್ಪೊಪ್ಪಿಕೊಂಡಿದ್ದಾರೆ. ಕಳ್ಳತನಗೈದಿದ್ದ ಸ್ವಲ್ಪ ಒಡವೆ ಹಾಗೂ ಆಭರಣವನ್ನು ಆಕೆ ಹಿಂದಿರುಗಿಸಿದ್ದು ಉಳಿದ ಒಡವೆಗಳನ್ನು ಕೊಡದೇ ಮೋಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

