ಮುದ್ದೂರಿನ ವಿ.ಎಸ್.ಎಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬರುವ ತಿಂಗಳು ಅಗಸ್ಟ್ 10ರಂದು ರಾಧೆ ಕೃಷ್ಣ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಈ ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಲಿದೆ.
ಈ ಸ್ಪರ್ಧೆಯು ಶಾಲೆಯ ವಿಎಸ್ಎಸ್ ಕ್ಯಾಂಪಸ್ ನಲ್ಲಿ ನಡೆಯಲಿದೆ. ಸಾರ್ವಜನಿಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಭಾಗವಹಿಸುವ ಮಕ್ಕಳ ಹೆಸರು ನೋಂದಾವಣಿಗೆ ಅಗಸ್ಟ್ 2 ಕೊನೆಯ ದಿನವಾಗಿರುತ್ತದೆ.
1-3ವರ್ಷದ ಮಕ್ಕಳಿಗೆ, 4-5 ವಯಸ್ಸಿನ ಮಕ್ಕಳಿಗೆ, 6-7ವರ್ಷದ ಮಕ್ಕಳಿಗೆ ಹೀಗೆ ಮೂರು ಹಂತಗಳಲ್ಲಿ ಸ್ಪರ್ಧೆ ನಡೆಯಲಿದೆ. ಸೀಮಿತ ಸ್ಪರ್ಧಿಗಳಿಗೆ ಅವಕಾಶವಿದ್ದು ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ ಇರಲಿದೆ.
ಕೊಳಲು ನಾದದ ಸಂಗೀತವನ್ನು ಶಾಲೆಯವರಿಂದಲೇ ಒದಗಿಸಲಾಗುತ್ತದೆ. ಹಿನ್ನೆಲೆ ಸಂಗೀತ ಕಡ್ಡಾಯವಲ್ಲ. ಇತರ ಹಾಡುಗಳು ಬಳಸುವುದು ನಿರ್ಬಂಧಿತ. ಅಭಿನಯಕ್ಕೆ 2 ನಿಮಿಷ ಇರಲಿದ್ದು ಆಗಮನ ಮತ್ತು ನಿರ್ಗಮನಕ್ಕೆ 1 ನಿಮಿಷ ಕಾಲಾವಕಾಶ ಇರಲಿದೆ.
ನೋಂದಣಿಗೆ 9482481648 ಈ ನಂಬರನ್ನು ಸಂಪರ್ಕಿಸಬಹುದು. ಪ್ರವೇಶ ಉಚಿತವಿರಲಿದೆ.

