ಗುರುಪುರ : ಗೋ ಕಳ್ಳತನ ಮಾಡಿ ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದಾಗ ಬಜರಂಗದಳ ಗುರುಪುರ ಪ್ರಖಂಡದ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ವಾಹನದಲ್ಲಿ ಮೂವರು ದನಕಳ್ಳರಿದ್ದು ಓರ್ವ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಇಬ್ಬರು ಆರೋಪಿಗಳಾದ ಮಯ್ಯದ್ದಿ ಹಂಡೇಲ್/ಬಾವುದ್ದಿನ್, ಹಂಡೇಲ್ ಮನೆ, ಮೊಯಿದಿನ್ ಮಸ್ಜಿದ್ ಬಳಿ ಅಸ್ಮಾ ಮಂಜ್, ಪುತ್ತಿಗೆ ಗ್ರಾಮ, ಮೂಡಬಿದ್ರೆ ಮತ್ತು ಇನ್ನೋರ್ವ M.A ಮೊಹಮ್ಮದ್ ಶರೀಫ್ ಫಾತಿಮಾ ಮಂಝಿಲ್ ಬಡಗ ಮಿಜಾರ್ ತಾಲೂಕು ಮೂಡಬಿದ್ರೆ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಕುದ್ರೋಳಿಯ ನಿವಾಸಿ ಮುಸ್ತಾಕ್ ಕುದ್ರೋಳಿ ಮಂಗಳೂರು ಈತನಿಗೆ ಮಾಂಸ ಮಾರಾಟ ಮಾಡಲು ಕೊಂಡೊಯುತ್ತಿದ್ದುದಾಗಿ ತಿಳಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಸ್ಥಳದಲ್ಲೇ ಬಂಧಿಸಿ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ವಾಹನ ಹಾಗೂ ಅಂದಾಜು 07-08 ದನದ 450 ಕೆಜಿ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ತಪ್ಪಿಸಿಕೊಂಡ ಇನ್ನೋರ್ವ ಆರೋಪಿ ತೋಡಾರಿನ ಸಫರ್ ಎಂದು ಗುರುತಿಸಲಾಗಿದ್ದು, ಈತ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ ಈತ ಹಾಗೂ ಕುದ್ರೋಳಿಯ ಮುಸ್ತಾಕ್ ಇಬ್ಬರನ್ನು ಕೂಡಾ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

