ಹೆಬ್ರಿ: ವರಂಗ ಗ್ರಾಮದ ಬಲ್ಲಾಡಿ ಅಡ್ಕ ಕ್ರಾಸ್ ಬಳಿ ರೇಷ್ಮಾ ಬಸ್ಸ್ ಕೆಂಪು ಕಲ್ಲು ತುಂಬಿದ ಟಿಪ್ಪರ್ ಲಾರಿಗೆ ಡಿಕ್ಕಿಯಾದ ಘಟನೆ ಸೆ.24ರಂದು ವರದಿಯಾಗಿತ್ತು.
ಮುದ್ರಾಡಿ ನಿವಾಸಿ ಅವಿನಾಶ್ ರವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ನಂತರ ಮುಂದಿನ ತನಿಖೆಯ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಹೆಚ್.ಸಿ, ರಿಚರ್ಡ್ ಕಿರಣ್ ರವರು (ಠಾಣಾ ಪ್ರಭಾರ) ಸ್ಥಳಕ್ಕೆ ಹೋಗಿ ಮಹಜರು ತಯಾರಿಸುವಾಗ ಅಪಘಾತಗೊಂಡ ಟಿಪ್ಪರ್ ಲಾರಿಯಲ್ಲಿ ಕೆಂಪು ಕಲ್ಲು ಲೋಡ್ ಇದ್ದು, ಇದರ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಲಾರಿ ಚಾಲಕ ಪ್ರಭಾಕರ ಕುಲಾಲ್ರವರಿಗೆ ಪೋನ್ ಮಾಡಿ ವಿಚಾರಿಸಿದಾಗ ಯಾವುದೇ ಪರವಾನಗಿ ಹೊಂದದೆ ಕಲ್ಲುಗಳನ್ನು ಸಾಗಾಟ ಮಾಡುವುದು ಕಂಡು ಬಂದಿರುತ್ತದೆ.
ಲಾರಿಯಲ್ಲಿ ಅಂದಾಜು 12,500 ರೂ ಮೌಲ್ಯದ ಸುಮಾರು ೨೫೦ ಕೆಂಪು ಕಲ್ಲುಗಳು ಇದ್ದು ಕೆಂಪು ಕಲ್ಲುಗಳನ್ನು ಎಲ್ಲಿಂದಲೋ ಕಳವು ಮಾಡಿ ಯಾವುದೇ ಪರವಾನಿಗೆಯನ್ನು ಪಡೆಯದೇ ಲಾಭದ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

