ಕುಂದಾಪುರ : ಮರವಂತೆ ಬೀಚ್ ನಲ್ಲಿ ನೀರುಪಾಲಾಗುತ್ತಿದ್ದ ಇಬ್ಬರು ಯುವಕರನ್ನು ಜೀವದ ಹಂಗು ತೊರೆದು ಕೆಎನ್ಡಿ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಈ ಘಟನೆ ಮರವಂತೆ ಶ್ರೀ ವರಾಹಸ್ವಾಮೀ ದೇವಸ್ಥಾನದ ಎದುರಿನ ಸಮುದ್ರದಲ್ಲಿ ಶುಕ್ರವಾರ ಸಂಜೆ ನಡೆದಿದ್ದು ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಇವರೆಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.
ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಆರೇಳು ಮಂದಿಯಿದ್ದ ತಂಡವು ಉಡುಪಿ ಜಿಲ್ಲೆಯ ಮರವಂತೆ ಸಮುದ್ರಕ್ಕೆ ಇಳಿದಿದ್ದು ಅಲೆಗಳ ರಭಸಕ್ಕೆ ಸಿಲುಕಿ ನೀರು ಪಾಲಾಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕೆಎನ್ಡಿ ಸಿಬ್ಬಂದಿ ನಿಶಾಂತ್ ಖಾರ್ವಿ ರಕ್ಷಿಸಿದ್ದು ಇವರಿಗೆ ಸ್ಥಳೀಯ ಮೀನುಗಾರ ವಿಷ್ಣುಖಾರ್ವಿ ಸಹಕರಿಸಿದ್ದಾರೆ.


