ಕಾರ್ಕಳ: ತೋಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಇಂದು ಮಾಳದ ಕನೆಗುಂಡಿ ಎಂಬಲ್ಲಿ ನಡೆದಿದೆ.

ಶ್ಯಾಮ (55) ಮೃತ ದುರ್ದೈವಿ. ಕೃಷಿ ಕೆಲಸಕ್ಕೆ ಹೊಗುವಾಗ ತೋಡಿಗೆ ಬಿದ್ದಿದ್ದು, ಈ ವೇಳೆ ಹೃದಯಾಘಾತವಾಗಿರಬೇಕು ಎಂದು ಶಂಕಿಸಲಾಗಿದೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
