ಬೆಂಗಳೂರಿನ ನಾಯಂಡಹಳ್ಳಿಯ ನೇಟಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರಿಂದ ಯಶಸ್ವಿ ಶಸ್ತ್ರ ಕ್ರಿಯೆ!

ಬೆಂಗಳೂರು : ಬೆಂಗಳೂರಿನಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂಬಂತೆ 8 ವರ್ಷದ ಬಾಲಕಿ ಹೊಟ್ಟೆಯಲ್ಲಿ ಬರೋಬ್ಬರಿ 3 ಕೆ.ಜಿ. ತೂಕದಷ್ಟು ಕೂದಲು ಪತ್ತೆಯಾಗಿದ್ದು, ವೈದ್ಯರೇ ಅಚ್ಚರಿಗೆ ಒಳಗಾಗಿದ್ದಾರೆ.
ಬೆಂಗಳೂರಿನ ನಾಯಂಡಹಳ್ಳಿಯ ನೇಟಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಜಡೆಯಂತೆ ಗಂಟು ಕಟ್ಟಿಕೊಂಡಿದ್ದ 3 ಕೆ.ಜಿ ಕೂದಲಿನ ಗಡ್ಡೆ ತೆಗೆದಿದ್ದಾರೆ.
ಬಹು ಅಪರೂಪದ ‘ಟ್ರೈಕೊ ಬೆಜೋರ್’ ಎಂಬ ಕೂದಲು ನುಂಗುವ ರೋಗದಿಂದ ಬಳಲುತ್ತಿದ್ದ ಬಾಲಕಿ ಸುಮಾರು 4-5 ವರ್ಷಗಳಿಂದ ಕೂದಲು ನುಂಗಿರುವ ಸಾಧ್ಯತೆಯಿದೆ.
ಅಷ್ಟೂ ವರ್ಷ ಪೋಷಕರಿಗೆ ಈ ಬಗ್ಗೆ ಸಣ್ಣ ಅನುಮಾನವೂ ಬಂದಿಲ್ಲ. ಇತ್ತೀಚೆಗೆ ತೂಕ ಕಡಿಮೆಯಾಗುತ್ತಿತ್ತು. ತೀವ್ರ ಹೊಟ್ಟೆ ನೋವು, ವಾಂತಿ ಹಾಗೂ ಹೊಟ್ಟೆ ಭಾಗದಲ್ಲಿ ಗಡ್ಡೆ ರೀತಿಯ ಗುರುತು ಪತ್ತೆಯಾಗಿದ್ದರಿಂದ ಎಚ್ಚೆತ್ತ ಪೋಷಕರು ನೇಟಸ್ ಆಸ್ಪತ್ರೆಗೆ ಕರೆತಂದಿದ್ದಾರೆ
