ಮಣಿಪಾಲ : ಮಂಚಿ ಎಂಬಲ್ಲಿ ಡಿಸೆoಬರ್ 7ರಂದು ಮಧ್ಯಾಹ್ನ ಕೋಳಿ ಅಂಕ ನಡೆಸುತ್ತಿದ್ದ ಎಂಟು ಮಂದಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಚಿನ್, ಪ್ರದೀಪ್, ಅಮೀರ್, ಜಯ ದೇವಾಡಿಗ, ದಯಾನಂದ ಪೂಜಾರಿ, ಪ್ರಜ್ವಲ್, ಅಚ್ಚಣ್ಣ ಮೂಲ್ಯ, ಫಾರೂಕ್ ಅಹಮ್ಮದ್ ಬಂಧಿತ ಆರೋಪಿಗಳು.
ಇವರಿಂದ 6500ರೂ. ಮೌಲ್ಯದ 4 ಕೋಳಿಗಳು, 15 ವಾಹನಗಳು ಹಾಗೂ 22100ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
