ಮಂಗಳೂರು: ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಕೂತವರಿಗೆ ಮನೆ ಕಟ್ಟಿ ಕೊಡುವ ನಿರ್ಧಾರ ಸರ್ಕಾರ ಮಾಡಿದೆ.
ಕೇರಳದ ರಾಜಕೀಯಕ್ಕಾಗಿ,ಒತ್ತಡಕ್ಕಾಗಿ ಮನೆ ಕಟ್ಟಿಕೊಡುವ ಕೆಲಸವಾಗ್ತಿದೆ. ಕೇರಳದಿಂದ ಬಂದ ನಾಲ್ಕು ಮುಸ್ಲಿಂರಿಗಾಗಿ ಈ ಧೋರಣೆಯನ್ನು ಸರ್ಕಾರ ಅನುಸರಿಸುತ್ತಿದೆ. ಕರ್ನಾಟಕದ ಇತರೆ ಕಡೆ ಈವರೆಗೆ ಸರ್ಕಾರ ಒಂದೇ ಒಂದು ಮನೆ ಕೊಟ್ಟಿಲ್ಲ. 2023ರಲ್ಲಿ ಕೋಗಿಲು ಬಡಾವಣೆಯಲ್ಲಿ ಒಂದೇ ಒಂದು ಮನೆಯಿರಲಿಲ್ಲ. ಈಗ ಎಲ್ಲಾ ಜಾಗವನ್ನು ಒತ್ತುವರಿ ಮಾಡಲಾಗಿದೆ. 2023ರ ನಂತರ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಅಲ್ಲಿ ಮನೆ ಕಟ್ಟಿಕೊಡಲಾಗಿದೆ. ಸರ್ಕಾರ ಈ ವಿಚಾರದಲ್ಲಿ ನಾಟಕವಾಡುತ್ತಿದೆ. ಇವರು ಎಲ್ಲಿಂದ ಬಂದವರು ಎಂಬ ಬಗ್ಗೆ ಪರಿಶೀಲನೆ ಮಾಡ್ತಿಲ್ಲ. ಸಿದ್ದರಾಮಯ್ಯನ,ಜಮೀರ್,ಡಿ.ಕೆ ಶಿವಕುಮಾರ್ ಆಸ್ತಿಯಲ್ಲಿ ಹೋಗಿ ನಾವು ಕೂತ್ರೆ ಬೇರೆ ಮನೆ ಕಟ್ಟಿಸಿ ಕೊಡ್ತಾರಾ. ನಾಲ್ಕು ಮುಸ್ಲಿಮರ ಓಟಿಗಾಗಿ ಈ ರೀತಿ ಮಾಡುವುದು ಸರಿಯಲ್ಲ. ವೋಟ್ ಹಾಕಿದ ಕರ್ನಾಟಕ ಜನತೆಗೆ ಸರ್ಕಾರ ಅನ್ಯಾಯ ಮಾಡ್ತಿದೆ. ಎಲ್ಲಿಂದ ಬಂದವರಿಗೆ ಮನೆ ಕೊಡ್ತಿದ್ದಾರೆ. ನಮ್ಮಲ್ಲೇ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮನೆ ಸಿಕ್ಕಿಲ್ಲ. ಕ್ಷಮಿಸಲಾರದ ಅನ್ಯಾಯವನ್ನು ಸರ್ಕಾರ ಮಾಡ್ತಿದೆ. ಜಮೀರ್ ಮತ್ತು ಗ್ಯಾಂಗ್ ಇವರನ್ನು 2023ರಲ್ಲಿ ಕರೆತಂದು ಕೂರಿಸಿದೆ. ಯಾರು ಬಂದ್ರು, ಯಾಕೆ ಬಂದ್ರು, ಕರೆಸಿದವರು ಯಾರು ಎಂಬ ಬಗ್ಗೆ ತನಿಖೆಯಾಗಬೇಕು. ಇದರ ಹಿಂದೆ ದೊಡ್ಡ ಪಿತೂರಿ ನಡೆದಿದೆ.
