ಎಡಪದವಿನಲ್ಲಿ ಫಾರ್ಚುನರ್ ಕಾರ್ ನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಕಳ್ಳತನ ಜಾಲವನ್ನು ಬುಧವಾರ ಎಡಪದವು ಶಾಸ್ತಾವು ದೇವಸ್ಥಾನದ ಬಳಿ ಪತ್ತೆ ಹಚ್ಚಿದ ಬಟ್ಟೆ ಪೊಲೀಸರು 4 ಹಸುಗಳನ್ನು ರಕ್ಷಿಸಿದ್ದಾರೆ.
ಆರೋಪಿಗಳು ದನಗಳ ಕೈಕಾಲು ಕಟ್ಟಿ ಹಿಂಸಾತ್ಮಕವಾಗಿ ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿತ್ತು. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.
ಕಳವು ಮಾಡಲಾದ ದನಗಳನ್ನು ಮಾಂಸಕ್ಕಾಗಿ ಸಾಗಾಟ ಮಾಡಲಾಗುತ್ತಿತ್ತು. ಕಾರಿನಲ್ಲಿದ್ದ ಮೂವರು ಆರೋಪಿಗಳಲ್ಲಿ ತಲ್ವಾರ್ ಇತ್ತೆನ್ನಲಾಗಿದೆ. ಕಾರಿಗೆ ನಕಲಿ ನಂಬರ್ ಪ್ಲೇಟ್ ಅನ್ನ ಅಳವಡಿಸಲಾಗಿದೆ.

