ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು (AERA) ಉಲ್ಲೇಖದ ನಿಯಮಗಳಂತೆ (TOR) ಕೆಲಸಕ್ಕೆ ಹಾಜರಾಗಲು ಸಲಹೆಗಾರ (ರಾಜಭಾಷೆ) (ಒಟ್ಟು ಒಂದು [01]) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ನಿಗದಿತ ಅರ್ಹತೆ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಯನ್ನು ಸೂಚಿಸಲಾದ ಖಾಲಿ ಹುದ್ದೆ ಪ್ರಕಾರ ಆಯಾ ವರ್ಗಾವಾರು ನೇಮಿಸಿಕೊಳ್ಳಲಾಗುತ್ತದೆ.
ಯಾವುದೇ ಪೂರ್ವ ಸೂಚನೆಯಿಲ್ಲದೆ ಮತ್ತು ಯಾವುದೇ ಕಾರಣ ನೀಡದೆ ಖಾಲಿ ಹುದ್ದೆಗಳನ್ನು ಬದಲಾಯಿಸಬಹುದು.
ಅರ್ಹತಾ ಮಾನದಂಡ ಸೇರಿದಂತೆ ಉಲ್ಲೇಖ ನಿಯಮಗಳು (TOR) ಇತ್ಯಾದಿ ವಿವರಗಳು AERAನ ವೆಬ್ಸೈಟ್: http://www.aera.gov.inನಲ್ಲಿ ಪ್ರಕಟವಾದ ಖಾಲಿ ಹುದ್ದೆಯ ನೋಟಿಸ್ನಲ್ಲಿ ಲಭ್ಯವಿವೆ.
ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ 08.04.2026ರ ಸಂಜೆ 5.30 ಗಂಟೆವರೆಗೆ. ಖಾಲಿ ಹುದ್ದೆಯ ನೋಟಿಸ್ನಲ್ಲಿ ಉಲ್ಲೇಖಿಸಲಾದ ವಿವರಗಳು/ವಿಧಾನದ ಪ್ರಕಾರ ಅರ್ಜಿಗಳನ್ನು ಸಲ್ಲಿಸಬೇಕು. ನಿಗದಿತ ದಿನಾಂಕ ಮತ್ತು ಸಮಯದ ನಂತರ ಸ್ವೀಕರಿಸಿದ ಅರ್ಜಿಗಳನ್ನು ಅಂಗೀಕರಿಸಲಾಗುವುದಿಲ್ಲ ಎಂದು ಉಪ ಮುಖ್ಯಸ್ಥರು ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ
3ನೇ ಮಹಡಿ, ಉಡಾನ್ ಭವನ, ಸಪ್ಪರ್ಜಂಗ್ ವಿಮಾನ ನಿಲ್ದಾಣ. ನವದೆಹಲಿ-110003 ರ ಪ್ರಕಟಣೆ ತಿಳಿಸಿದೆ.

