ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವವು ಮಾರ್ಚ್ 30ರಿಂದ ಏಪ್ರಿಲ್ 5ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಪ್ರಕಟಿಸಿದೆ.

ಮಾರ್ಚ್ 30ರಂದು ಪ್ರಾತಃಕಾಲ ಪೂಜೆ, ತೋರಣ ಮುಹೂರ್ತ ಮತ್ತು ಉಗ್ರಾಣ ಮುಹೂರ್ತ ನಡೆಯಲಿದ್ದು, ಸಂಜೆ ಹೊರೆಕಾಣಿಕೆ ಸಮರ್ಪಣೆ ಹಾಗೂ ಚಂದ್ರಮಂಡಲ ರಥ ಸಮರ್ಪಣಾ ಮೆರವಣಿಗೆ ನಡೆಯಲಿದೆ.
ಮಾರ್ಚ್ 31 ಮತ್ತು ಏಪ್ರಿಲ್ 2ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್ 1ರಂದು ಧ್ವಜಾರೋಹಣ ಹಾಗೂ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಏಪ್ರಿಲ್ 3ರಂದು ರಥಾರೋಹಣ, ಮಹಾರಥೋತ್ಸವ ಮತ್ತು ಸುಡುಮದ್ದು ಪ್ರದರ್ಶನ ನಡೆಯಲಿದೆ.
ಏಪ್ರಿಲ್ 4ರಂದು ತುಲಾಭಾರಾದಿ ಸೇವೆ, ಮಹಾಪೂಜೆ, ಕೆರೆ ದೀಪೋತ್ಸವ ಹಾಗೂ ಧ್ವಜಾವರೋಹಣ ನಡೆಯಲಿದೆ.
ಏಪ್ರಿಲ್ 5ರಂದು ಮಹಾಸಂಪ್ರೋಕ್ಷಣೆ, ಮಹಾಪೂಜೆ ಮತ್ತು ಭದ್ರಕಾಳಿ ಕುರುಜಿ ತರ್ಪಣದೊಂದಿಗೆ ಉತ್ಸವ ಸಂಪನ್ನವಾಗಲಿದೆ.


