ಉಡುಪಿ: ದೊಂದೂರುಕಟ್ಟೆಯ ಬಾರ್ ಮಾಲಕ, ಹೋಟೆಲ್ ಉದ್ಯಮಿ, ಬಂಟರ ಸಂಘದ ಮಾಜಿ ಅಧ್ಯಕ್ಷ ಸಕರಾಮ್ ಶೆಟ್ಟಿ ಅಲ್ಪಕಾಲದ ಅಸೌಖ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ದೊಂದೂರುಕಟ್ಟೆ, ಮಣಿಪುರ ಭಾಗದಲ್ಲಿ ಸಾಮಾಜಿಕ, ಧಾರ್ಮಿಕ, ಕ್ರೀಡಾ ಪ್ರೋತ್ಸಾಹಕರಾಗಿ ತನ್ನನ್ನು ತಾನು ತೊಡಗಿಸಿಕೊಂಡ ಸಕರಾಮ್ ಶೆಟ್ಟಿ ಅವರು ಕೊಡುಗೈ ದಾನಿಯಾಗಿದ್ದರು.
ಮೃತರು ಪತ್ನಿ ಓರ್ವ ಪುತ್ರ, ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

