ಉಡುಪಿ: ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಅಂಚೆ ಇಲಾಖೆಯು ‘ಭೂಮಿ ತಾಯಿಗೆ ಒಂದು ಪತ್ರ: ಪ್ರಕೃತಿ ಉಳಿಸಲು ನನ್ನ ಭರವಸೆ’ ಎಂಬ ವಿಷಯದಲ್ಲಿ ಪತ್ರ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ.
ಸ್ಪರ್ಧಾಳುಗಳು ಹಿಂದಿ, ಇಂಗ್ಲೀಷ್ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಅಂತರ್ದೇಶೀಯ ಪತ್ರ (ಇನ್ಲ್ಯಾಂಡ್ ಲೆಟರ್) ಕಾರ್ಡ್ನಲ್ಲಿ 500 ಶಬ್ದಗಳು ಮೀರದಂತೆ ಬರೆದು ಅಥವಾ ಎ-4 ಹಾಳೆಯಲ್ಲಿ 1000 ಶಬ್ದಗಳು ಮೀರದಂತೆ ಲೇಖನ ವನ್ನು ಕೈಬರಹದಲ್ಲಿ ಬರೆದು-ಲಕೋಟೆಯಲ್ಲಿ ತುಂಬಿಸಿ, ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ-576101 ಇವರಿಗೆ ಅಕ್ಟೋಬರ್ 31 ರೊಳಗಾಗಿ ಅಂಚೆ ಮೂಲಕ ಕಳುಸಿಕೊಡಬಹುದು.
ಕೊರಿಯರ್ ಮೂಲಕ ಬಂದ ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
ಸ್ಪರ್ಧಾಳುಗಳು ತಮ್ಮ ಲೇಖನದ ಮೇಲ್ಬಾಗದಲ್ಲಿ 18 ವರ್ಷ ಮೇಲಿನವರು /18 ವರ್ಷ ಕೆಳಗಿನವರು ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನಮೂದಿ ಸಬೇಕು. ಅತ್ಯುತ್ತಮ ಮೂರು ಕೃತಿಗಳಿಗೆ ಬಹುಮಾನಗಳನ್ನು ದೇಶೀಯ ಮಟ್ಟದಲ್ಲಿ ಕ್ರಮವಾಗಿ 50,000, 25,000, 10,000 ಕರ್ನಾಟಕ ವೃತ್ತ ಮಟ್ಟದಲ್ಲಿ 25,000, 10,000 ಮತ್ತು 5,000 ಅನ್ನು ನೀಡಲಾಗುವುದು.
ಈ ಸ್ಪರ್ಧೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

