ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗುವ ಭಕ್ತಾಭಿಮಾನಿಗಳ ಗಮನಕ್ಕೆ ಒಂದು ಮುಖ್ಯವಾದ ಮಾಹಿತಿಯನ್ನು ತಿಳಿಸಿದೆ.
ದೇವಾಲಯದಲ್ಲಿ ಆಗಸ್ಟ್ 23 ಮತ್ತು ಆಗಸ್ಟ್ 24 ರಂದು ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಮೊದಲಾದ ಸೇವೆಗಳು ನಡೆಯುವುದಿಲ್ಲ. ಆಗಸ್ಟ್ 23 ಏಕಾದಶಿ ಮತ್ತು ಆಗಸ್ಟ್ 24 ಅತಿರಿಕ್ತ ಏಕಾದಶಿಯಾಗಿದ್ದು, ಈ ಹಿನ್ನೆಲೆ ಕೆಲವು ಸೇವೆಗಳು ನಡೆಯುವುದಿಲ್ಲ.
ಉಳಿದಂತೆ ಎಂದಿನ ಹಾಗೆಯೇ ದೇವರ ದರ್ಶನ, ಅರ್ಚನೆ, ಮಹಾ ಪೂಜೆ, ಮಂಗಳಾರತಿ ಮೊದಲಾದವುಗಳು ನಡೆಯಲಿವೆ ಎಂದು ದೇವಾಲಯದ ಪ್ರಕಟಣೆ ಮಾಹಿತಿ ನೀಡಿರುವುದಾಗಿದೆ.

