ತಿರುಪತಿ: ಅರಣ್ಯದಿಂದ ಕೂಡಿದ ತಿರುಪತಿಯ ಬೆಟ್ಟ ಹತ್ತುವ ಭಕ್ತರ ಸುರಕ್ಷತೆಗಾಗಿ, ವನ್ಯ ಜೀವಿಗಳಿಂದ ಯಾತ್ರಿಕರನ್ನು ರಕ್ಷಿಸುವ ಸಲುವಾಗಿ ರೊಬೋಟಿಕ್ ನಾಯಿಗಳನ್ನು ಬಳಕೆ ಮಾಡಲು ಟಿಟಿಡಿ ಚಿಂತನೆ ನಡೆಸಿದೆ.
ಈ ಎಐ ಆಧಾರಿತ ನಾಯಿ ರೊಬೋಟ್ಗಳು ಬೆಟ್ಟದಲ್ಲಿ ವನ್ಯಮೃಗಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡಲಿವೆ. ಭಕ್ತರ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಈ ವಿನೂತನ ಪ್ರಯತ್ನಕ್ಕೆ ಕೈ ಹಾಕಲು ಚಿಂತನೆ ನಡೆಸಿರುವುದಾಗಿದ್ದು, ಈ ಚತುರ್ಭುಜ ರೊಬೋಟ್ ಅನ್ನು ಈಗಾಗಲೇ ಪರಿಶೀಲನೆ ಸಹ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ರೋಬೋಟಿಕ್ ನಾಯಿಯು 360-ಡಿಗ್ರಿ LIDAR, ಆಪ್ಟಿಕಲ್ ಮತ್ತು ಥರ್ಮಲ್ ಕ್ಯಾಮೆರಾಗಳನ್ನು ಹೊಂದಿದೆ. ಸಂಪೂರ್ಣ ಕತ್ತಲೆ ಮತ್ತು ಮಂಜು ಸೇರಿದಂತೆ ವಿವಿಧ ಹವಾಮಾನ ಪರಿಸ್ಥಿತಿಗಳಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸಲಿವೆ. ಇದರ AI ವ್ಯವಸ್ಥೆಯು ನೈಜ ಸಮಯದಲ್ಲಿ ವಸ್ತುಗಳನ್ನು ವರ್ಗೀಕರಿಸಬಹುದು. ಮಾನವರು, ಕಾಡು ಪ್ರಾಣಿಗಳು, ಸಾಕು ಪ್ರಾಣಿಗಳು ಮತ್ತು ವಾಹನಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲದು. ಇದು ದೃಶ್ಯಗಳನ್ನು ಲೈವ್-ಸ್ಟ್ರೀಮ್ ಮಾಡಬಹುದು. ಕೇಂದ್ರ ನಿಯಂತ್ರಣ ಕೊಠಡಿಗಳು ಮತ್ತು ತುರ್ತು ಪ್ರತಿಕ್ರಿಯೆ ತಂಡಗಳಿಗೆ ಜಿಯೋ-ಟ್ಯಾಗ್ ಮಾಡಿದ ಎಚ್ಚರಿಕೆಗಳನ್ನು ಕಳುಹಿಸಬಹುದು.
ಸಂಭಾವ್ಯ ಬೆದರಿಕೆ ಪತ್ತೆಯಾದಲ್ಲಿ, ರೋಬೋಟಿಕ್ ನಾಯಿ ಲೈವ್ ಥರ್ಮಲ್ ವೀಡಿಯೊ ಫೀಡ್ಗಳನ್ನು ರವಾನಿಸಬಹುದು. ಜಿಯೋ-ಟ್ಯಾಗ್ ಮಾಡಲಾದ ಎಚ್ಚರಿಕೆಗಳನ್ನು ನೀಡಬಹುದು. ಅಧಿಕಾರಿಗಳು ಮತ್ತು ತುರ್ತು ಪ್ರತಿಕ್ರಿಯೆ ಘಟಕಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತ್ವರಿತವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡಲಿವೆ.

