ಮಂಗಳೂರು: ನಗರದ ಕೊಟ್ಟಾರ ಕ್ರಾಸ್ ಬಳಿ ಮೊಬೈಲ್ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ತಮ್ಮನೇ ಅಣ್ಣನನ್ನು ಚೂರಿಯಿಂದ ಇರಿದು ಕೊಂದ ಘಟನೆ ನಡೆದಿದೆ.
ಬೆಳಗಾವಿ ಮೂಲದ ಅಡಿವೆಪ್ಪ ಕುಂಬಾರ (43) ಮೃತ ವ್ಯಕ್ತಿ. ಆ.30ರ ರಾತ್ರಿ ಅಣ್ಣ-ತಮ್ಮನ ನಡುವೆ ಮನೆಯಲ್ಲಿ ಜಗಳವಾಗಿದ್ದು, ಈ ವೇಳೆ ರಾಜು ಚೂರಿಯಿಂದ ಅಡಿವೆಪ್ಪನ ಎದೆಗೆ ಇರಿದಿದ್ದಾನೆ.
ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ಅಡಿವೆಪ್ಪನನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಉರ್ವಾ ಠಾಣೆ ಪೊಲೀಸರು ಆರೋಪಿ ರಾಜುವನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

