ಮಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ SIR ವೇಳೆ ಚುನಾವಣಾ ಪ್ರಕ್ರಿಯೆಯಲ್ಲಿನ ಎಡವಟ್ಟು ಬೆಳಕಿಗೆ ಬಂದಿದೆ.
ಮಂಗಳೂರಿನ ಬಿಜೈ ನಿವಾಸಿ, 61 ವರ್ಷದ ಡೊನಾಲ್ಡ್ ಜೋಸೆಫ್ ರೇಗೊ ಅವರ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಕೈಬಿಡಲಾಗಿದೆ. ಪರಿಶೀಲಿಸಿದಾಗ, ಅವರ ಹೆಸರನ್ನು ASDDO ಪಟ್ಟಿಯ ‘ಮೃತ’ ವಿಭಾಗದಲ್ಲಿ ಸೇರಿಸಿರುವುದು ಪತ್ತೆಯಾಗಿದೆ.
ಜೀವಂತವಾಗಿರುವ ವ್ಯಕ್ತಿಯನ್ನೇ ಮೃತ ಎಂದು ದಾಖಲಿಸಿರುವ ಘಟನೆ ಇದೀಗ ಮತದಾರರ ಪಟ್ಟಿ ಪರಿಷ್ಕರಣೆಯ ನಿಖರತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

