ಮೈಸೂರು: ಕುಡಿದ ಮತ್ತಿನಲ್ಲಿ ಉದ್ಯಾನವನದ ಬೇಲಿ ಹಾರಲು ಮುಂದಾದ ವ್ಯಕ್ತಿಯೊಬ್ಬರು ಮೊನಚಾದ ಕಬ್ಬಿಣದ ರಾಡು ಚುಚ್ಚಿ ಮೃತಪಟ್ಟಿರುವ ದಾರುಣ ಘಟನೆ ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ರಾಜೀವ್ ನಗರದ ರವಿ (38) ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ ಮನೆ ಬಿಟ್ಟಿದ್ದ ರವಿ, ಕುಡಿದ ಮತ್ತಿನಲ್ಲಿ ಬೇಲಿ ಹಾರಲು ಮುಂದಾದಾಗ ಕಬ್ಬಿಣದ ರಾಡು ತೊಡೆಗೆ ಚುಚ್ಚಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ದಾರಿಹೋಕರು ಮೃತದೇಹ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಜರಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

