ಮಲ್ಪೆ: ಬೋಟಿನಿಂದ ಆಕಸ್ಮಿಕವಾಗಿ ಧಕ್ಕೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ. ಮೃತರನ್ನು ದಯಾನಂದ ಕೋಡಾರಕರ (59) ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 9ರಂದು ಮೀನುಗಾರಿಕೆಯಿಂದ ಮರಳಿದ್ದ ದಯಾನಂದ ಅವರು, ರಾತ್ರಿ ಮತ್ತೆ ಮೀನುಗಾರಿಕೆ ಕೆಲಸಕ್ಕೆ ತೆರಳಲು ಬಲೆ ಸಿದ್ಧಪಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬೋಟಿನಿಂದ ಧಕ್ಕೆಗೆ ಬಿದ್ದು ನೀರಿಗೆ ಬಿದ್ದಿದ್ದಾರೆ. ಬಳಿಕ ಅವರು ಕಾಣೆಯಾಗಿದ್ದರು.
ಸತತ ಹುಡುಕಾಟದ ಬಳಿಕ ಸೆಪ್ಟೆಂಬರ್ 10ರಂದು ಬೆಳಗ್ಗೆ ಸುಮಾರು 10.10ಕ್ಕೆ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

