ಮಂಗಳೂರು : ಬಸ್ಸಿನಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡ ಮಹಿಳೆಯನ್ನು ನಾಟೆಕಲ್ ಕಣಚೂರು ಆಸ್ಪತ್ರೆಗೆ ಬಸ್ಸಿನಲ್ಲಿಯೇ ಕರೆತಂದು ಬಸ್ ಸಿಬ್ಬಂದಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.
ವಿಟ್ಲ ಕಡೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಮರ್ಸಿ ಟ್ರಾವೆಲ್ಸ್ ಬಸ್ಸಿನಲ್ಲಿ ಮುಡಿಪು ಟಿಕೆಟ್ ಪಡೆದುಕೊಂಡಿದ್ದ ಮಹಿಳೆ ಮುಡಿಪು ತಲುಪಿದರೂ ಇಳಿದಿರಲಿಲ್ಲ. ಇದರಿಂದ ನಿರ್ವಾಹಕ ಯಾಕೂಬ್ ಎಂಬವರು ಮಹಿಳೆ ಸಮೀಪ ತೆರಳಿದಾಗ ಸಹಪ್ರಯಾಣಿಕರೊಬ್ಬರು, ಆಕೆ ಅಸ್ವಸ್ಥಳಾಗಿ ಕುಸಿದುಬಿದ್ದರೆಂದು ತಿಳಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಚಾಲಕ ಸವಾದ್, ನಿರ್ವಾಹಕ ಯಾಕೂಬ್ 10 ಕಿ.ಮೀ ದೂರಕ್ಕೆ ಬಸ್ಸನ್ನು ತಂದು ನಾಟೆಕಲ್ ಕಣಚೂರು ಆಸ್ಪತ್ರೆಯೊಳಗೆ ಕೊಂಡೊಯ್ಯಿದರು. ಮಹಿಳೆಯನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

