ಬ್ರಹ್ಮಾವರ: ಬೆಂಗಳೂರಿಗೆ ತೆರಳುವುದಾಗಿ ತಾಯಿಗೆ ಕರೆ ಮಾಡಿ ತಿಳಿಸಿದ ಬಳಿಕ ಮನೆಗೆ ಮರಳದೆ 38 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರದಲ್ಲಿ ವರದಿಯಾಗಿದೆ.
ಬ್ರಹ್ಮಾವರದ ಬ್ಯಾಂಕರ್ ಕಾಲೋನಿ ನಿವಾಸಿ ಮಂಜುನಾಥ ಶೆಟ್ಟಿ ಅವರ ಪುತ್ರ ಸುಚೇತನ ಶೆಟ್ಟಿ (38) ನಾಪತ್ತೆಯಾದವರು. ಇವರು ಏರ್ಟೆಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಸೆ.15ರಂದು ಬೆಳಿಗ್ಗೆ 8 ಗಂಟೆಗೆ ಮಂಗಳೂರಿನಲ್ಲಿ ಮೀಟಿಂಗ್ ಇದೆ ಎಂದು ಹೇಳಿ, ತಮ್ಮ ಅಣ್ಣನ ಹೆಸರಿನಲ್ಲಿರುವ ಬೈಕ್ನಲ್ಲಿ ಮನೆಯಿಂದ ತೆರಳಿದ್ದರು.
ಬಳಿಕ ತಾಯಿಗೆ ದೂರವಾಣಿ ಕರೆ ಮಾಡಿ ಬೆಂಗಳೂರಿಗೆ ಹೋಗುತ್ತಿದ್ದು, ಎರಡು ದಿನಗಳಲ್ಲಿ ಹಿಂದಿರುಗುವುದಾಗಿ ತಿಳಿಸಿದ್ದರು. ಆದರೆ, ಇದುವರೆಗೂ ಮನೆಗೆ ವಾಪಸಾಗದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಅವರ ತಂದೆ ಮಂಜುನಾಥ ಶೆಟ್ಟಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 203/2026ರ ಅಡಿಯಲ್ಲಿ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

