ಬೆಂಗಳೂರು : ಪಕ್ಷದಲ್ಲಿ ಸೃಷ್ಟಿಯಾಗಿರುವ ಭಿನ್ನಮತ ಶಮನಕ್ಕಾಗಿ ಬಿಜೆಪಿ ನಾಯಕರ ಜೊತೆಗೆ ಆರ್.ಎಸ್.ಎಸ್ ನಾಯಕರು ಸೆ.12ರಂದು ಸಭೆ ಸೇರುವ ಸಾಧ್ಯತೆ ಇದೆ.
ಪಕ್ಷದ ಮೂಲಗಳಿಂದ ಈ ಮಾಹಿತಿ ತಿಳಿದು ಬಂದಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಸೇರಿದಂತೆ ಎರಡೂ ಬಣದ ಸದಸ್ಯರು ಭಾಗಿಯಾಗುವ ಸಾಧ್ಯತೆ ಇದೆ.
ಈ ಸಭೆಯ ದಿನಾಂಕವನ್ನು ಪಕ್ಷದ ಮುಖಂಡರು ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

