ಮಳೆಗಾಲ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಸಹ ಇನ್ನೂ ಮಾನ್ಸೂನ್ ಮಳೆಯ ಅಬ್ಬರ ನಿಂತಿಲ್ಲ. ದೇಶಾದ್ಯಂತ ಈಗಲೂ ಮಳೆಯಾಗುತ್ತಿದೆ.
ಈ ಹಿನ್ನೆಲೆ ಇಂದು ಎಲ್ಲೆಲ್ಲಿ ಎಲ್ಲೆಲ್ಲಿ ಮಳೆಯಾಗಲಿದೆ? ಹವಾಮಾನ ಇಲಾಖೆ ಯಾವ ಪ್ರದೇಶಕ್ಕೆ ಎಚ್ಚರಿಕೆ ನೀಡಿದೆ.
ಸಾಮಾನ್ಯವಾಗಿ ಅಕ್ಟೋಬರ್ ಮೊದಲ ವಾರ ಮತ್ತು ಎರಡನೇ ವಾರದ ಮಧ್ಯೆ ಮುಂಗಾರು ಮಳೆ ಭಾರತದಿಂದ ನಿರ್ಗಮಿಸುತ್ತದೆ. ಈಗಾಗಲೇ ದೆಹಲಿ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಉತ್ತರ ಭಾರತದ ರಾಜ್ಯಗಳನ್ನು ಮಾನ್ಸೂನ್ ಮಳೆ ಸಂಪೂರ್ಣವಾಗಿ ತತ್ತರಗೊಳಿಸಿದೆ. ಇದೀಗ ಮತ್ತೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಸಿಕ್ಕಿದೆ.
ಪೂರ್ವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಿಂದ ಮಾನ್ಸೂನ್ ನಿರ್ಗಮನದ ಬಗ್ಗೆ ಮಾಹಿತಿ ಸಿಗಬೇಕಿತ್ತು. ಈ ಎಲ್ಲದರ ನಡುವೆ, ಈಶಾನ್ಯ ಭಾರತದಲ್ಲಿ ಇದ್ದಕ್ಕಿದ್ದಂತೆ ಮಾನ್ಸೂನ್ ಹೆಚ್ಚು ಸಕ್ರಿಯವಾಗಲು ಪ್ರಾರಂಭಿಸಿದೆ. ಇದು ಈಶಾನ್ಯದಲ್ಲಿ ಮುಂಗಾರು ದುರ್ಬಲಗೊಳ್ಳುವ ಸಮಯವಾಗಿದ್ದರೂ, ಇದ್ದಕ್ಕಿದ್ದಂತೆ ಪ್ರಗತಿ ಸಾಧಿಸಿದೆ.
ಹವಾಮಾನ ಇಲಾಖೆಯ ಪ್ರಕಾರ, ಪ್ರಸ್ತುತ ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ಆಗಿರುವುದರಿಂದ ಇದು ಸಂಭವಿಸುತ್ತಿದೆಯಂತೆ. ಬಾಂಗ್ಲಾದೇಶದ ದಕ್ಷಿಣ ಭಾಗಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಂಡಮಾರುತದ ಪರಿಚಲನೆಯು ದಕ್ಷಿಣದ ಕಡೆಗೆ ಚಲಿಸುತ್ತಿದೆ ಎಂದು ವರದಿಯಾಗಿದೆ.
ಪರಿಣಾಮದಿಂದ ಮುಂದಿನ 24 ಗಂಟೆಗಳಲ್ಲಿ ಉತ್ತರ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ರೂಪುಗೊಳ್ಳುತ್ತಿದೆ. ಈ ಹವಾಮಾನ ವ್ಯವಸ್ಥೆಯು ಶನಿವಾರದಿಂದ ಮುಂದಿನ 3 ದಿನಗಳವರೆಗೆ ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್ನಲ್ಲಿ ಹಾದುಹೋಗಬಹುದು. ಇಂತಹ ಪರಿಸ್ಥಿತಿಯಲ್ಲಿ ಈಶಾನ್ಯ ರಾಜ್ಯಗಳು ಸೇರಿದಂತೆ ಇಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ ಭಾಗದಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ, ಇದರ ಜೊತೆಗೆ ಮಲೆನಾಡು ಭಾಗಗಳಾದ ಶಿವಮೊಗ್ಗ, ಸಕಲೇಶಪುರ, ಚಿಕ್ಕಮಗಳೂರು, ಮಡಿಕೇರಿ ಭಾಗದ ಅಲ್ಲಲ್ಲಿ ಸಾಧಾರಣ ಮಳೆ ಸುರಿಯಲಿದೆ.


