ಉಡುಪಿ : ಜಿಲ್ಲೆಯಲ್ಲಿ ಶೇ.96. 57ರಷ್ಟು ಮತದಾನ ದಾಖಲಾಗಿದೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಲಿಗ್ರಾಮ ಪ.ಪಂ. ಕಚೇರಿಯಲ್ಲಿ ಹಾಗೂ ಶಾಸಕರು ತಮ್ಮ ಕ್ಷೇತ್ರದ ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಮತದಾನ ಮಾಡಿದರು.
ಜಿಲ್ಲೆಯ 158 ಮತಗಟ್ಟೆ ವ್ಯಾಪ್ತಿ ಯಲ್ಲಿ 1,195 ಪುರುಷ, 1,285 ಮಹಿಳಾ ಮತದಾರರು ಸೇರಿ ಒಟ್ಟು 2,480 ಮತದಾರರು ಪಟ್ಟಿಯಲ್ಲಿದ್ದರು. ಅವರಲ್ಲಿ 1,154 ಪುರುಷರು, 1,241 ಮಹಿಳೆಯರು ಸೇರಿದಂತೆ 2,395 ಮಂದಿ ಮತದಾನ ಮಾಡಿದರು. ಯಾವುದೇ ತಾಲೂಕಿನಲ್ಲೂ ಶೇ.100 ರಷ್ಟು ಮತದಾನವಾಗಿಲ್ಲ.
ಕಾರ್ಕಳದಲ್ಲಿ ಶೇ.99.28, ಉಡುಪಿ, ಹೆಬ್ರಿಯಲ್ಲಿ ತಲಾ ಶೇ.99.18, ಬ್ರಹ್ಮಾವರದಲ್ಲಿ ಶೇ.98.83, ಕುಂದಾಪುರ ಶೇ.93.59 ಹಾಗೂ ಬೈಂದೂರಿನಲ್ಲಿ ಶೇ.88.80ರಷ್ಟು ಮತದಾನವಾಗಿದೆ.
ಬೈಂದೂರಿನಲ್ಲಿ 29, ಕುಂದಾಪುರದಲ್ಲಿ 17 ಸದಸ್ಯರು ಮತದಾನ ಮಾಡಿರಲಿಲ್ಲ. ಇಡೀ ಜಿಲ್ಲೆಯಲ್ಲಿ ಇದು ದೊಡ್ಡ ಸಂಖ್ಯೆ. ಅಧಿಕಾರಿಗಳ ಮನವೊಲಿಕೆಯಿಂದ ಕೆಲವರು ಮತದಾನ ಮಾಡಿದರೆ, ಇನ್ನು ಕೆಲವರು ಮಾಡಲಿಲ್ಲ. ಉಳಿದಂತೆ ಕಾಪುವಿನಲ್ಲಿ 7, ಬ್ರಹ್ಮಾವರದಲ್ಲಿ 5, ಉಡುಪಿಯಲ್ಲಿ 3, ಹೆಬ್ರಿಯಲ್ಲಿ 1 ಹಾಗೂ ಕಾರ್ಕಳದಲ್ಲಿ 3 ಸದಸ್ಯರು ಮತದಾನ ಮಾಡಿರಲಿಲ್ಲ.

