ಕುಂದಾಪುರ : ಕಾವ್ರಾಡಿ ಗ್ರಾಮದ ಮಹಿಳೆ ಪತಿ ಹಾಗೂ ಇತರರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ.
ಶೇಖ್ ಮೊಹಮ್ಮದ್ ಯಾಕೂಬ್ ಅವರನ್ನು ವಿವಾಹವಾಗಿದ್ದು, ನಜ್ಮಿನ್ನೀಸಾ, ಶೇಖ್ ಶಂಸುದ್ದೀನ್ ಅವರು ಮದುವೆ ಸಂಬಂಧವಾಗಿ 100 ಪವನ್ ಚಿನ್ನಾಭರಣಗಳು ಮತ್ತು ಕಾರನ್ನು ವರದಕ್ಷಿಣೆಯಾಗಿ ಕೇಳಿದ್ದರು. ನಿರಾಕರಿಸಿದ್ದಕ್ಕೆ ಬೆದರಿಕೆ ಹಾಕಿದ್ದರು. ಬಳಿಕ 70 ಪವನ್ ಚಿನ್ನ ಹಾಗೂ ಕಾರನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು.
ಮುಂದಿನ ದಿನಗಳಲ್ಲೂ ಆಸ್ತಿ, ಹೆಚ್ಚಿನ ವರದಕ್ಷಿಣೆ ಪಡೆಯಲು ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.

