ಮಂಗಳೂರು : ಜಂಕ್ಷನ್ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಲೋಹಿತ್ ಕುಮಾರ್ ಅವರು ಸ್ಕೂಟರ್ ಪಾರ್ಕ್ ಮಾಡಿ ಪುತ್ತೂರಿನ ಮನೆಗೆ ತೆರಳಿದ್ದರು. ಮರುದಿನ ಬಂದು ನೋಡಿದಾಗ ಸ್ಕೂಟರ್ ಕಳವಾಗಿರುವುದು ಗಮನಕ್ಕೆ ಬಂದಿದೆ. ಠಾಣೆಗೆ ದೂರು ನೀಡಿದ್ದಾರೆ.

