ಚಿನ್ನದ ಬೆಲೆ ಮಂಗಳವಾರ (ನವೆಂಬರ್ 5ಕ್ಕಿಂತ) ಬುಧವಾರ (ನವೆಂಬರ್ 6ಕ್ಕೆ) ಇಳಿಕೆಯಾಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 100 ರೂಪಾಯಿ ಇಳಿದಿದೆ. ನಿನ್ನೆ ಬರೋಬ್ಬರಿ 1,600 ರೂಪಾಯಿ ಇಳಿಕೆ ಆಗಿತ್ತು. ಈ ಎರಡು ದಿನಗಳಲ್ಲಿ 1,700 ರೂಪಾಯಿ ಚಿನ್ನದ ಬೆಲೆ ಕುಸಿದಂತಾಗಿದೆ.
ಶುದ್ಧ ಚಿನ್ನದ ಬೆಲೆ ಇದೀಗ ಪ್ರತಿ 100 ಗ್ರಾಂಗೆ 8,02,300 ರೂಪಾಯಿ ಆಗಿದೆ. ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 80,230ಕ್ಕೆ ಕುಸಿತವಾಗಿದೆ.
ಇನ್ನು 1 ಗ್ರಾಂ ಚಿನ್ನದ ಬೆಲೆಯು 8,023 ರೂಪಾಯಿ ಇದೆ. ಅಲ್ಲದೇ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಸಹ ಕುಸಿತ ಮುಂದುವರಿದಿದೆ. ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆಯು ಇದೀಗ ಈಗ 100 ರೂಪಾಯಿ ಕುಸಿತ ಕಂಡಿದೆ. ಇದು ಮಂಗಳವಾರ 1,500 ರೂಪಾಯಿ ಕುಸಿತ ಕಂಡಿತ್ತು. ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆಯು 73,540 ರೂಪಾಯಿಯಾಗಿದೆ.

