ಜಮ್ಮು-ಕಾಶ್ಮೀರ ಸದನ ಸಭೆಯ ನಂತರ ನ್ಯಾಶನಲ್ ಕಾನ್ಫರೆನ್ಸ್ ಹಿರಿಯ ನಾಯಕರಾದ ಡಿಸಿಎಂ ಸುರೀಂದರ್ ಸಿಂಗ್ ಚೌಧರಿ ಸಂವಿಧಾನ ಪರಿಚ್ಛೇದ 370 ಮರುಸ್ಥಾಪನೆ ಕುರಿತು ನಿರ್ಣಯ ಮಂಡಿಸಿದರು.
ಉಪ ಮುಖ್ಯಮಂತ್ರಿ ಅವರು ಈ ನಿರ್ಣಯವನ್ನು ಮಂಡಿಸುತ್ತಿದ್ದಂತೆಯೇ ಬಿಜೆಪಿ ಸದಸ್ಯರು ತಮ್ಮ ಕುರ್ಚಿಯಿಂದ ಎದ್ದು ನಿರ್ಣಯ ಮಂಡಿಸುವುದನ್ನು ವಿರೋಧಿಸಿದರು. ಇದು ಈ ಕಲಾಪದ ಭಾಗವಾಗಿರಲಿಲ್ಲ ಎಂದು ವಾದಿಸಿದರು.
ಆದರೆ ಬಿಜೆಪಿ ಸದಸ್ಯರ ಪ್ರತಿಭಟನೆಯ ನಡುವೆಯು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಬುಧವಾರ ಸಂವಿಧಾನದ 370 ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿದೆ.
ಬಿಜೆಪಿ ಸದಸ್ಯರ ಪ್ರತಿಭಟನೆಯ ನಡುವೆ, ಸ್ಪೀಕರ್ ಅಬ್ದುರ್ ರಹೀಮ್ ರಾಥರ್ ರವರು ಬಿಜೆಪಿ ನಾಯಕರಿಗೆ ಈ ವಿಷಯದ ಬಗ್ಗೆ ಮಾತನಾಡಲು ಹೇಳಿದರು. ಆದರೆ, ಬಿಜೆಪಿ ಸದಸ್ಯರು ಪ್ರತಿಭಟನೆ ಮತ್ತು ಘೋಷಣೆಗಳನ್ನು ಮುಂದುವರಿಸಿದರು. ಹಾಗಾಗಿ ಸಭಾಧ್ಯಕ್ಷರು, ‘ನೀವು ಮಾತನಾಡಲು ಬಯಸದಿದ್ದರೆ ಮತಕ್ಕೆ ಹಾಕುತ್ತೇನೆ’ ಎಂದು ಬಿಜೆಪಿ ಸದಸ್ಯರ ಪ್ರತಿಭಟನೆ ನಡುವೆಯೆ ಸ್ಪೀಕರ್ ನಿರ್ಣಯವನ್ನು ಮತಕ್ಕೆ ಹಾಕಿದರು. ಹೀಗಿರುವಾಗ ಬಿಜೆಪಿ ಪ್ರತಿಭಟನೆ ಮತ್ತು ಘೋಷಣೆಗಳ ನಡುವೆ ಸದನದಲ್ಲಿ ನಿರ್ಣಯ ಅಂಗೀಕರಿಸಲಾಯಿತು. ನಿರ್ಣಯ ಅಂಗೀಕರಿಸಿದ ನಂತರದಲ್ಲಿ ಸ್ಪೀಕರ್ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.
ಆಗಸ್ಟ್ 15, 2019 ರಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರವು ಸಂವಿಧಾನದ ವಿಧಿ 370 ಮತ್ತು 35ಎಯನ್ನು ರದ್ದುಗೊಳಿಸಿತು. ಮತ್ತು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತ್ತು.

