ನವದೆಹಲಿ: ಲಾರೆನ್ಸ್ ಬಿಷ್ಣೋಯ್ ಭಾವಚಿತ್ರವುಳ್ಳ ಟೀಶರ್ಟ್ಗಳು ಆನ್ಲೈನ್ ಮಾರಾಟ ತಾಣಗಳಾದ ಮೀಶೋ ಮತ್ತು ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿದ್ದು, ನೆಟ್ಟಿಗರು ಈ ಕುರಿತು ಕಿಡಿಕಾರಿದ್ದಾರೆ.
ವಿವಾದಿತ ಟೀಶರ್ಟ್ಗಳಲ್ಲಿ “ಗ್ಯಾಂಗ್ಸ್ಟರ್’ ಅಥವಾ “ರಿಯಲ್ ಹೀರೊ’ ಎಂದೂ ಬರೆಯಲಾಗಿದೆ. ಮಕ್ಕಳ ಅಳತೆಯ ಟೀಶರ್ಟ್ಗಳೂ ಲಭ್ಯವಿದೆ.
ನೆಟ್ಟಿಗರಿಂದ ವಿರೋಧ ಎದುರಾದ ಹಿನ್ನೆಲೆಯಲ್ಲಿ ಮೀಶೋ ಇವುಗಳ ಮಾರಾಟ ಹಿಂಪಡೆದಿದೆ. ಫ್ಲಿಪ್ಕಾರ್ಟ್ನಲ್ಲಿ ಇವು ಇನ್ನೂ ಮಾರಾಟಕ್ಕಿವೆ ಎಂದು ತಿಳಿದುಬಂದಿದೆ.

